ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ನಗರೋತ್ಥಾನ ಯೋಜನೆ: ₹1,519 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಒಪ್ಪಿಗೆ

Last Updated 4 ಮೇ 2022, 10:07 IST
ಅಕ್ಷರ ಗಾತ್ರ

ಬೆಂಗಳೂರು: ಅಮೃತ ನಗರೋತ್ಥಾನ ಯೋಜನೆಯ ನಾಲ್ಕನೇ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ₹ 1,519.43 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜು ಅಧ್ಯಕ್ಷತೆಯ ರಾಜ್ಯ ಮಟ್ಟದ ಸಮಿತಿ ಬುಧವಾರ ಅನುಮೋದನೆ ನೀಡಿದೆ.

ರಾಜ್ಯದ 15 ಜಿಲ್ಲೆಗಳಲ್ಲಿನ ಹಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ 2022–23 ಮತ್ತು 2023–24ನೇ ಆರ್ಥಿಕ ವರ್ಷಗಳ ಅವಧಿಯಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯ ಅಡಿಯಲ್ಲಿ ಈ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳು ಸಲ್ಲಿಸಿದ್ದ ಕ್ರಿಯಾ ಯೋಜನೆಗಳನ್ನು ಪರಿಶೀಲಿಸಿದ ಸಮಿತಿ, ಒಪ್ಪಿಗೆ ನೀಡಿತು.

ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ನಾಲ್ಕನೇ ಹಂತದ ಯೋಜನೆಯಡಿ ₹ 3,885 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಜನವರಿಯಲ್ಲಿ ಸಂಪುಟ ಸಭೆ ಒಪ್ಪಿಗೆ ಸೂಚಿಸಿತ್ತು. ಅದಕ್ಕೆ ಪೂರಕವಾಗಿ ಈವರೆಗೆ 25 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು ₹ 2,367.57 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ರಾಜ್ಯ ಮಟ್ಟದ ಸಮಿತಿಯ ಅನುಮೋದನೆ ಪಡೆಯಲಾಗಿದೆ.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್‌ ನಾಗಭೂಷಣ್‌, ಪೌರಾಡಳಿತ ಇಲಾಖೆ ನಿರ್ದೇಶಕಿ ಅರ್ಚನಾ, ಮುಖ್ಯ ಎಂಜಿನಿಯರ್‌ ಸತ್ಯನಾರಾಯಣ ಸಭೆಯಲ್ಲಿದ್ದರು.

ಅನುಮೋದನೆಯಾದ ಕ್ರಿಯಾ ಯೋಜನೆಗಳ ವಿವರ: ಬೆಂಗಳೂರು ಗ್ರಾಮಾಂತರ ಜಿಲ್ಲೆ– ₹ 80.34 ಕೋಟಿ, ಮಂಡ್ಯ ಜಿಲ್ಲೆ– ₹ 89.25 ಕೋಟಿ, ಕೋಲಾರ ಜಿಲ್ಲೆ– ₹ 123.25 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆ (ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿ)– ₹ 84.82 ಕೋಟಿ, ದಕ್ಷಿಣ ಕನ್ನಡ ಜಿಲ್ಲೆ (ಉಳ್ಳಾಲ ನಗರಸಭೆ, ಸೋಮೇಶ್ವರ ಮತ್ತು ಕೋಟೆಕಾರು ಪಟ್ಟಣ ಪಂಚಾಯಿತಿ ಹೊರತುಪಡಿಸಿ)– ₹ 72.25 ಕೋಟಿ, ಧಾರವಾಡ ಜಿಲ್ಲೆ– ₹29.75 ಕೋಟಿ.

ಗದಗ ಜಿಲ್ಲೆ( ಗದಗ-ಬೆಟಗೇರಿ ನಗರಸಭೆ ಹೊರತುಪಡಿಸಿ)– ₹ 55.25 ಕೋಟಿ, ₹ 106.25 ಕೋಟಿ, ಹಾವೇರಿ ಜಿಲ್ಲೆ (ಶಿಗ್ಗಾವಿ, ಬಂಕಾಪುರ, ಸವಣೂರು ಪುರಸಭೆ ಹೊರತುಪಡಿಸಿ)– ₹ 97.75 ಕೋಟಿ, ರಾಯಚೂರು ಜಿಲ್ಲೆ (ಮಾನ್ವಿ, ಜಾಲಹಳ್ಳಿ ಪುರಸಭೆ ಮತ್ತು ಕವಿತಾಳ ಪಟ್ಟಣ ಪಂಚಾಯಿತಿ ಹೊರತುಪಡಿಸಿ)– ₹ 110.50 ಕೋಟಿ, ಯಾದಗಿರಿ ಜಿಲ್ಲೆ– ₹ 114.75 ಕೋಟಿ, ಬೀದರ್ ಜಿಲ್ಲೆ– ₹ 97.75 ಕೋಟಿ, ಶಿವಮೊಗ್ಗ ಜಿಲ್ಲೆ– ₹ 106.25 ಕೋಟಿ, ಬಾಗಲಕೋಟೆ ಜಿಲ್ಲೆ– ₹ 208.25 ಕೋಟಿ ಮತ್ತು ಉತ್ತರ ಕನ್ನಡ ಜಿಲ್ಲೆ– ₹ 143.02 ಕೋಟಿ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT