ಮಂಗಳವಾರ, ಮೇ 24, 2022
24 °C

20 ಮಂದಿ ಡಿವೈಎಸ್‌ಪಿ, 86 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಪ್ಪತ್ತು ಮಂದಿ ಡಿವೈಎಸ್‍ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ 86 ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಅವರನ್ನು ಕೂಡ ವರ್ಗಾವಣೆ ಮಾಡಿದೆ.

ಅದರಂತೆ, ಪ್ರಶಾಂತ್ ಜಿ ಮುನ್ನೋಳಿ ಅವರನ್ನು ಶಿವಮೊಗ್ಗ ಉಪವಿಭಾಗಕ್ಕೆ, ಟಿ.ಮಂಜುನಾಥ್ ಅವರನ್ನು ಮಂಡ್ಯ ಉಪವಿಭಾಗ, ಕೆ.ಎನ್. ರಮೇಶ್ ಅವರನ್ನು ಚನ್ನಪಟ್ಟಣ ಉಪವಿಭಾಗಕ್ಕೆ, ಮೋಹನ್ ಕುಮಾರ್ .ಬಿ.ಎಸ್ ಅವರನ್ನು ರಾಮನಗರ ಉಪವಿಭಾಗ,  ಪಿ. ರಾಜ ಇಮಾಮ್ ಕಾಸಿಂ ಅವರನ್ನು ದೇವರಾಜ ಉಪವಿಭಾಗ, ಮೈಸೂರು ನಗರಕ್ಕೆ, ಎಸ್.ಇ. ಗಂಗಾಧರಸ್ವಾಮಿ ಅವರನ್ನು ಮೈಸೂರು ನಗರ ಸಂಚಾರ ಉಪವಿಭಾಗಕ್ಕೆ, ಅಶ್ವತ್ಥನಾರಾಯಣ ಸಿ.ಕೆ ಅವರನ್ನು ಮೈಸೂರು ನಗರ ಸಿಸಿಬಿಗೆ ಮತ್ತು ಎಲ್.ನಾಗೇಶ್ ಅವರನ್ನು ಅರಸಿಕೆರೆ ಉಪವಿಭಾಗದಲ್ಲಿಯೇ ಮುಂದುವರಿಯಲು ಹಾಗೂ ಬಿ.ಆರ್. ಗೋಪಿ ಅವರನ್ನು ಸಕಲೇಶಪುರ ಉಪವಿಭಾಗದಲ್ಲಿಯೇ ಮುಂದುವರಿಯುವಂತೆ ತಿಳಿಸಲಾಗಿದೆ.

ಇನ್ನುಳಿದಂತೆ, ಉಮೇಶ ಬಿ. ಚಿಕ್ಕಮಠ ಅವರನ್ನು ಕಲಬುರಗಿ ಜಿಲ್ಲೆಯ ಶಹಬಾದ್ ಉಪವಿಭಾಗ, ಅರುಣಕುಮಾರ ಕೋಳೂರ ಅವರನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಉಪವಿಭಾಗಕ್ಕೆ, ಕರುಣಾಕರಶೆಟ್ಟಿ .ಜೆ.ಎಮ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ, ಪಿ.ಎ. ಪುರುಶೋತ್ತಮ್ ಮತ್ತು ಎಂ.ಎನ್. ಶಶಿಧರ್ ಅವರನ್ನು ರಾಜ್ಯ ಗುಪ್ತವಾರ್ತೆಗೆ, ಎಸ್.ಎನ್. ಸಂದೇಶ್ ಕುಮಾರ್ ಅವರನ್ನು ಚನ್ನಪಟ್ಟಣ ಪಿಟಿಎಸ್‌ಗೆ, ವಿ. ಮರಿಯಪ್ಪ ಅವರನ್ನು ರಾಜ್ಯ ಗುಪ್ತವಾರ್ತೆಗೆ, ವೆಂಕನಗೌಡ ಪಾಟೀಲ್ ಅವರನ್ನು ಭ್ರಷ್ಟಾಚಾರ ನಿಗ್ರಹ ದದಳಕ್ಕೆ, ಉಮೇಶ್ ಈಶ್ವರ್ ನಾಯಕ್ ಅವರನ್ನು ಶಿವಮೊಗ್ಗ ಜಿಲ್ಲೆಯ ಡಿಸಿಆರ್‌ಬಿಗೆ ಮತ್ತು ಎಲ್.ನವೀನ್ ಕುಮಾರ್ ಅವರನ್ನು ಸಿಐಡಿಗೆ ವರ್ಗಾಯಿಸಿ ಆದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು