ಮೂಡುಬಿದಿರೆ: ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ 8 ವಿದ್ಯಾರ್ಥಿಗಳು 650ಕ್ಕಿಂತಲೂ ಹೆಚ್ಚು ಅಂಕ, 37 ವಿದ್ಯಾರ್ಥಿಗಳು 650 ಅಂಕ, 914 ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಅರ್ನವ್ ಅಯ್ಯಪ್ಪ (685), ಅನರ್ಘ್ಯ ಕೆ. (683), ಪಿ.ಎಸ್. ರವೀಂದ್ರ (670), ಖುಷಿ ಚೌಗಲೆ (661), ಪೂಜಾ ಜಿ.ಎಸ್. (656), ಚಂದುಸೇನ್ ಪೈಲ್ವಾನ್ (651), ಚಿನ್ಮಯಿ ಆರ್.(650), ವರುಣ್ ತೇಜ್ ವೈ.ಡಿ. ( 650) ಅಂಕ ಪಡೆದಿದ್ದಾರೆ. ಆಳ್ವಾಸ್ ಒಂದೇ ಕಾಲೇಜಿನಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟಿಗೆ ಅರ್ಹತೆ ಪಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದು ಹೇಳಿದರು.
ರಾಷ್ಟ್ರ ಮಟ್ಟದಲ್ಲಿ ಪರಿಶಿಷ್ಟ ವರ್ಗ ವಿಭಾಗದಲ್ಲಿ ವಾಲ್ಮೀಕಿ ತೇಜಸ್ವಿನಿ 92, ಉಮೇಶ್ ಸಣ್ಣಹನುಮಪ್ಪ 119 ಹಾಗೂ ಅಂಗವಿಕಲರ ವಿಭಾಗದಲ್ಲಿ ಸುಶೀಲ 477ನೇ ರ್‍ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.