ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸಾಮೂಹಿಕ ಆತ್ಮಹತ್ಯೆ- ಇತ್ತೀಚಿನ ಕೆಲವು ಪ್ರಕರಣ

Last Updated 20 ನವೆಂಬರ್ 2021, 20:47 IST
ಅಕ್ಷರ ಗಾತ್ರ

ಬೆಂಗಳೂರು

ಸೆಪ್ಟೆಂಬರ್‌ 17, 2021: ಬ್ಯಾಡರಹಳ್ಳಿ ಬಳಿಯ ತಿಗಳರಪಾಳ್ಯದ ಮನೆಯಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾ (34), ಸಿಂಧೂರಾಣಿ (33) ಹಾಗೂ ಮಧುಸಾಗರ್ (25) ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಜೊತೆಯಲ್ಲಿದ್ದ ಒಂಬತ್ತು ತಿಂಗಳ ಕೂಸನ್ನೂ ಕೊಂದಿದ್ದರು.

ಅಕ್ಟೋಬರ್‌, 2021: ಕೋವಿಡ್‌ನಿಂದ ಮೃತಪಟ್ಟ, ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕ ದಿವಂಗತ ಪ್ರಸನ್ನಕುಮಾರ್ ಅವರ ಪತ್ನಿ ವಸಂತಾ (40), ಹಾಗೂ ಇಬ್ಬರು ಮಕ್ಕಳೊಂದಿಗೆ (ಯಶವಂತ ಮತ್ತು ನಿಶ್ಚಿತಾ) ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಗೆ ಬರಬೇಕಾಗಿದ್ದ ಪರಿಹಾರ ಕೈಗೆ ಬರದೇ ನೊಂದಿದ್ದರು.

ಕೋಲಾರ

ನವೆಂಬರ್‌ 7, 2021: ಕೋಲಾರದ ಕಾರಂಜಿಕಟ್ಟೆಯಲ್ಲಿ ಒಂದೇ ಕುಟುಂಬದ ಐವರರಿಂದ ಆತ್ಮಹತ್ಯೆ. ಪುಷ್ಪಾ, ಅವರ ತಂದೆ ಮುನಿಯಪ್ಪ, ತಾಯಿ ನಾರಾಯಣಮ್ಮ, ಪತಿ ಬಾಬು ಹಾಗೂ ಮಗಳು ಗಂಗೋತ್ರಿ ಆತ್ಮಹತ್ಯೆ ಮಾಡಿಕೊಂಡರು. ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು. ಆದರೆ ನವಜಾತ ಶಿಶುವಿನ ಅಪಹರಣಕ್ಕೆ ಸಂಬಂಧಿಸಿ ಪೊಲೀಸ್‌ ವಿಚಾರಣೆ ನಡೆದ ಕಾರಣ ಮರ್ಯಾದೆಗೆ ಅಂಜಿ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿತು.

ದಾವಣಗೆರೆ

ಸೆಪ್ಟೆಂಬರ್‌ 19, 2021: ದಾವಣಗೆರೆ ನಗರದ ಶೇಖರಪ್ಪ ನಗರದಲ್ಲಿ, ಲಾರಿ ಚಾಲಕರಾಗಿದ್ದ ಕೃಷ್ಣ ನಾಯ್ಕ (44), ಕಾಯಿಲೆ ಪೀಡಿತ ಪತ್ನಿ ಸುಮಾ (32) ಮತ್ತು ಏಳು ವರ್ಷದ ಪುತ್ರ ಧ್ರುವನಿಗೆ ವಿಷ ನೀಡಿ, ಬಳಿಕ ತಾವು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಜುಲೈ 3, 2021: ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಮಂಜಪ್ಪ ಅವರ ಪತ್ನಿ ಚಂದ್ರಮ್ಮ (26), ಮೂರು ವರ್ಷದ ಪುತ್ರಿ ಹರ್ಷಿತಾಳಿಗೆ ನೇಣು ಬಿಗಿದು, ಬಳಿಕ ತಾವೂ ನೇಣು ಹಾಕಿಕೊಂಡಿದ್ದರು.

ಮಾರ್ಚ್‌ 16, 2021: ಚನ್ನಗಿರಿ ತಾಲ್ಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ಶ್ವೇತಾ (28) ಅನಾರೋಗ್ಯದಿಂದ ಬೇಸತ್ತು ತಮ್ಮ 11 ತಿಂಗಳ ಮಗಳಿಗೆ ನೇಣು ಬಿಗಿದು, ಬಳಿಕ ತಾವೂ ನೇಣು ಹಾಕಿಕೊಂಡಿದ್ದರು.

ಜನವರಿ 21, 2021: ಕುಟುಂಬದಲ್ಲಿ ಮನಸ್ತಾಪದಿಂದ ಚನ್ನಗಿರಿ ತಾಲ್ಲೂಕಿನ ಮರವಂಜಿ ಗ್ರಾಮದ ನಿವೃತ್ತ ಶಿಕ್ಷಕ ರಾಜಪ್ಪ ಅವರ ಪತ್ನಿ ಕಮಲಮ್ಮ (50) ಅವರು ಪುತ್ರಿ ಶ್ರುತಿ (24) ಹಾಗೂ ಪುತ್ರ ಸಂಜಯ್‌ (20) ಜೊತೆಗೆ ಸೂಳೆಕೆರೆಯ ಭದ್ರಾ ನಾಲೆಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದರು.

ಅಕ್ಟೋಬರ್‌ 1, 2020: ಪತಿಯೊಂದಿಗೆ ಮನಸ್ತಾಪದ ಕಾರಣ ದಾವಣಗೆರೆ ಜಯನಗರದ ಶಿಕ್ಷಕಿ ಶ್ರೀದೇವಿ ಅವರು ತಮ್ಮ ಮಕ್ಕಳಾದ ಹಂಸಿಕಾ (12) ಹಾಗೂ ನೂತನ (9) ಅವರನ್ನು ವೇಲಿನಿಂದ ಸೊಂಟಕ್ಕೆ ಬಿಗಿದುಕೊಂಡು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಶಿವಮೊಗ್ಗ

ಸೆ. 7, 2021: ಕೊರೊನಾ ಸಂಕಷ್ಟದ ವೇಳೆ ಪತಿ ಮಾಡಿದ ಸಾಲ ತೀರಿಸುವಂತೆ ಮನೆ ಬಳಿ ಬಂದು ಹಣ ಕೇಳುವವರ ಸಂಖ್ಯೆ ಹೆಚ್ಚಾದ ಕಾರಣ ಭದ್ರಾವತಿ ಹೊಸಮನೆ ಸುಭಾಷ್ ನಗರದ ಧನಶೇಖರ್ ಪತ್ನಿ ಸಂಗೀತಾ (32), ಮಗಳು ಮಧುಶ್ರೀ (11) ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆಗಸ್ಟ್‌ 2021: ಶಿವಮೊಗ್ಗ ಆಲ್ಕೊಳ ಸಮೀಪದ ಮಂಗಳಮಂದಿರ ರಸ್ತೆಯ ಉದ್ಯಮಿ ರಾಮದಾಸ್‌ (58) ಮತ್ತು ಅವರ ಪತ್ನಿ ಅನುಪಮಾ (55) ಆತ್ಮಹತ್ಯೆ. ಮಾನಸಿಕ ಖಿನ್ನತೆ ಕಾರಣ ಎಂಬುದು ಸಂಬಂಧಿಕರ ಮಾಹಿತಿ.

ಚಾಮರಾಜನಗರ

2020, ಜೂನ್‌ 1: ಚಾಮರಾಜನಗರ ತಾಲ್ಲೂಕಿನ ಎಚ್‌.ಮೂಕಹಳ್ಳಿಯ ರೈತ ಮಹಾದೇವಪ್ಪ (46), ಪತ್ನಿ ಮಂಗಳಮ್ಮ (40), ಮಕ್ಕಳಾದ ಜ್ಯೋತಿ (16), ಶ್ರುತಿ (11) ಜೊತೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಾದೇವಪ್ಪ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ 20 ದಿನಗಳ ಹಿಂದೆಯಷ್ಟೇ ಕೋವಿಡ್‌ನಿಂದ ಚೇತರಿಸಿಕೊಂಡಿದ್ದರು. ಸ್ಥಳೀಯರ ಪ್ರಕಾರ, ಆ ಕುಟುಂಬದವರು ಮಾನಸಿಕವಾಗಿ ನೊಂದಿದ್ದರು.

ಮಂಗಳೂರು

ಆಗಸ್ಟ್‌ 17, 2021: ನಗರದ ಚಿತ್ರಾಪುರದ ಫ್ಲ್ಯಾಟ್‌ನಲ್ಲಿ ರಮೇಶ್ ಸುವರ್ಣ (45) ಮತ್ತು ಗುಣವತಿ ಸುವರ್ಣ (35) ಆತ್ಮಹತ್ಯೆ. ಕೋವಿಡ್‌–19 ಬಂದಿದೆ ಎಂದು ಭಯಪಟ್ಟು ಆತ್ಮಹತ್ಯೆ. ಆದರೆ ಇಬ್ಬರ ವರದಿಯೂ ನೆಗೆಟಿವ್ ಆಗಿತ್ತು.

ಅಕ್ಟೋಬರ್‌ 18, 2021: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮದ ಪಾದೆಕರ್ಯದ ಸುಬ್ರಹ್ಮಣ್ಯ ಭಟ್ (84), ಶಾರದಾ ಭಟ್ (78) ದಂಪತಿ ಆತ್ಮಹತ್ಯೆ. ಅನಾರೋಗ್ಯದಿಂದ ದಂಪತಿ ಮನನೊಂದಿದ್ದರು.

ಮಾಹಿತಿ: ವಿನಾಯಕ ಭಟ್‌, ಸಂತೋಷ ಜಿಗಳಿಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT