ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್ಪಸ್ವಲ್ಪ’ವಲ್ಲದೆ ಮತ್ತೇನು?: ವಸಂತಕುಮಾರ್‌ ಹೇಳಿಕೆಗೆ ಚಂದ್ರಶೇಖರ್ ಆಕ್ಷೇಪ

Last Updated 10 ಜೂನ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘6ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರಲ್ಲಿನ ಬಸವಣ್ಣನವರ ವಿಷಯಕ್ಕೆ ಸಂಬಂಧಿಸಿ ಬರಗೂರು ರಾಮಚಂದ್ರಪ್ಪ ಅವರುಮೂಲಗಳನ್ನು ಪರಿಶೀಲಿಸದೇ ಹೇಳಿಕೆ ನೀಡಿದ್ದಾರೆ’ ಎಂಬ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿಕೆಗೆಸಮಾಜ ವಿಜ್ಞಾನ ಪರಿಷ್ಕರಣ ಸಮಿತಿಯ ಈ ಹಿಂದಿನ ಅಧ್ಯಕ್ಷ ಡಾ. ಟಿ.ಆರ್. ಚಂದ್ರಶೇಖರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮೂಲ ಪರಿಷ್ಕರಣೆಯ ಪಠ್ಯದಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ಮರು ಪರಿಷ್ಕರಣೆಯಲ್ಲಿ ಅಳವಡಿಸಿದ್ದಾರೆ ಎಂಬ ಬರಗೂರರ ಮಾತೇ ಸತ್ಯ. ಮರು ಪರಿಷ್ಕರಣೆಯಲ್ಲಿ ‘ಕಾಯಕವೇ ಕೈಲಾಸ - ಇದು ಅವರ ಮುಖ್ಯ ಬೋಧನೆಗಳಲ್ಲಿ ಒಂದಾಗಿದೆ’ ಎಂದು ಸೇರಿಸಿದ್ದಾರೆ. ‘ಕಾಯಕವೇ ಕೈಲಾಸ’ ಎಂದು ಹೇಳಿದವರು ಆಯ್ದಕ್ಕಿ ಮಾರಯ್ಯನವರು. ಮೂಲಪರಿಷ್ಕರಣೆಯಲ್ಲಿ ಈ ಮಾತು ಇರಲಿಲ್ಲ. ಮರುಪರಿಷ್ಕರಣೆಯಲ್ಲಿ ಈ ಮಾತು ಸೇರಿಸಿದ್ದಲ್ಲದೆ, ಬರಗೂರು ಸಮಿತಿ ಪರಿಷ್ಕರಣೆ ಪಠ್ಯದಲ್ಲಿ ಇಲ್ಲದಿದ್ದ ‘ಚಟುವಟಿಕೆ’ಯ ಸೂಚನೆಗಳನ್ನು ಕೊಟ್ಟಿದ್ದಾರೆ. ಇದಿಷ್ಟು ಪ್ರೊ. ಬರಗೂರು ಹೇಳಿದಂತೆ ‘ಅಲ್ಪಸ್ವಲ್ಪ’ ಬದಲಾವಣೆಯಲ್ಲದೆ ಮತ್ತೇನು’ ಎಂದೂ ಪ್ರಶ್ನಿಸಿದ್ದಾರೆ.

‘ಪಠ್ಯಪುಸ್ತಕವನ್ನು ಬರಗೂರು ಅವರು ಓದಿಲ್ಲವೋ ಅಥವಾ ವಸಂತಕುಮಾರ್ ಓದಿಲ್ಲವೋ ಎಂಬ ಸತ್ಯ ಇದರಿಂದ ತಿಳಿದು ಬರುತ್ತದೆ. ಆದ್ದರಿಂದ, ಸಲ್ಲದ ಆಕ್ಷೇಪ ಸರಿಯಲ್ಲಎಂದುಅವರುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT