ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಕಮ್ಮಿ ಇಲ್ಲ, ನಾವೇ ನಿಜವಾದ ಹೀರೋಗಳು: ‘ಅಗ್ನಿವೀರ’ ನಾರಿಯರ ಯಶೋಗಾಥೆ

ಮಿಲಿಟರಿ ಪೊಲೀಸ್‌ ಕೇಂದ್ರದಲ್ಲಿ ತರಬೇತಿ
Last Updated 7 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಯಾರಿಗೂ ಕಮ್ಮಿ ಇಲ್ಲ. ಸೇನೆ ಸೇರಿದ್ದಕ್ಕೆ ಹೆಮ್ಮೆ ಇದೆ. ದೇಶ ಸೇವೆ ಮಾಡುವ ಅವಕಾಶ ದೊರೆತಿದೆ. ನಾವೇ ನಿಜವಾದ ಹೀರೋಗಳು...’

ನಗರದ ನೀಲಸಂದ್ರದಲ್ಲಿರುವ ‘ಕೋರ್‌ ಮಿಲಿಟರಿ ಪೊಲೀಸ್‌’ (ಸಿಎಂಪಿ) ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಯುವತಿಯರ ಮಾತುಗಳಿವು.

ಅಗ್ನಿಪಥ ಯೋಜನೆ ಜಾರಿಯಾದ ಬಳಿಕ ಮೊದಲ ಬಾರಿ ಅಗ್ನಿವೀರರಾಗಿ ಆಯ್ಕೆಯಾಗಿರುವ 100 ಯುವತಿಯರು, ಸೇನೆಯಲ್ಲಿ ಕಾರ್ಯನಿರ್ವಹಿಸಲು ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಸೂರ್ಯ ಉದಯಿಸುವ ಮುನ್ನವೇ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಇವರ ತರಬೇತಿ ಚಟುವಟಿಕೆಗಳು ಆರಂಭವಾಗುತ್ತವೆ. ವಿವಿಧ ರೈಫಲ್‌ಗಳ ಬಳಕೆ, ಕಾರ್ಯಾಚರಣೆಗಳನ್ನು ಯಾವ ರೀತಿ ಕೈಗೊಳ್ಳಬೇಕು ಮತ್ತು ವಾಹನಗಳನ್ನು ಚಲಾಯಿಸುವುದು ಹೇಗೆ ಎನ್ನುವುದೂ ಸೇರಿದಂತೆ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. 31 ವಾರಗಳ ಕಾಲ ನಿರಂತರ ತರಬೇತಿ ಬಳಿಕ ಗಡಿ ಪ್ರದೇಶವೂ ಸೇರಿದಂತೆ ಸೇನೆಯ ವಿವಿಧ ಘಟಕಗಳಿಗೆ ನಿಯೋಜಿಸಲಾಗುತ್ತದೆ.

ಸುಮಾರು ಎರಡೂವರೆ ಲಕ್ಷ ಅರ್ಜಿ ಸಲ್ಲಿಸಿದವರಲ್ಲಿ ಈ 100 ಯುವತಿಯರನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ಆಯ್ಕೆಯಾಗಿರುವವರಲ್ಲಿ ಶೇ 50ಕ್ಕೂ ಹೆಚ್ಚು ಯುವತಿಯರು ಪದವೀಧರರು. ಬಿ.ಎ, ಬಿ.ಕಾಂ, ಬಿ.ಎಸ್ಸಿ ಪದವಿ ಪೂರೈಸಿದ್ದಾರೆ. ಇದೀಗ ಒಂದು ತಿಂಗಳು ತರಬೇತಿ ಪೂರ್ಣಗೊಳಿಸಿರುವ ಯುವತಿಯರು ತಮ್ಮ ಅನುಭವ ಮತ್ತು ಹಿನ್ನೆಲೆ ಬಿಚ್ಚಿಟ್ಟಿದ್ದಾರೆ.

‘ನನ್ನ ತಂದೆ ಕೃಷಿಕ. ಅಲ್ಪ ಜಮೀನು ಇದೆ. ನಾವು ಮೂವರು ಸಹೋದರಿಯರು. ನಾನೇ ಆಸಕ್ತಿ ವಹಿಸಿ ಸೇನೆ ಸೇರಲು ನಿರ್ಧರಿಸಿದೆ. ಸೇನೆ ಸೇರಿದರೆ ಕಷ್ಟ ಎಂದು ಹೇಳುತ್ತಿದ್ದರು. ಆದರೆ, ನಾನು ಛಲದಿಂದ ಸೇನೆ ಸೇರಿದೆ. ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇನೆ. ಈಗ ಎಲ್ಲರೂ ನನ್ನನ್ನು ಗೌರವಿಸುತ್ತಾರೆ. ತರಬೇತಿ ಕಠಿಣವಾಗಿದ್ದರೂ ಆನಂದಿಸುತ್ತಿದ್ದೇವೆ’ ಎಂದು ವಿಶಾಖಪಟ್ಟಣದ ಮಾಧವಿ ಹೆಮ್ಮೆಯಿಂದ ಹೇಳಿದರು.

100 ಯುವತಿಯರಲ್ಲಿ ಕರ್ನಾಟಕದಿಂದ ಆಯ್ಕೆಯಾದವರು ಶ್ರೀದೇವಿ ಮಾತ್ರ. ಉಡುಪಿಯ ಕುಂದಾಪುರದ ಶ್ರೀದೇವಿ ಅಧಿಕಾರಿಯಾಗುವ ಕನಸು ಕಂಡಿದ್ದರು. ಇದಕ್ಕಾಗಿ ಧಾರವಾಡಕ್ಕೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ಸಹ ಪಡೆಯುತ್ತಿದ್ದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಶ್ರೀದೇವಿ, ಸೇನೆ ಬಗ್ಗೆ ಮೊದಲಿನಿಂದಲೂ ಒಲವು ಹೊಂದಿದ್ದರು. ಬಿ.ಕಾಂ. ಪದವಿ ಪಡೆದಿರುವ ಅವರಿಗೆ ತಾವು ಕಂಡಿದ್ದ ಕನಸು ನನಸಾಗಿರುವುದಕ್ಕೆ ಸಂತಸವಿದೆ.

‘ಸೇನೆ ಸೇರಬೇಕು ಎನ್ನುವುದು ನನ್ನ ಕನಸು ಮತ್ತು ಗುರಿಯಾಗಿತ್ತು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವುದು ನನಗೆ ಇಷ್ಟ ಇರಲಿಲ್ಲ. ಸೇನೆ ಸೇರಿದ್ದಕ್ಕೆ ಹೆಮ್ಮೆಯಾಗಿದೆ. ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ತಂದೆ–ತಾಯಿ ನನಗೆ ಪ್ರೋತ್ಸಾಹಿಸಿದರು’ ಎಂದು ಹೆಮ್ಮೆಯಿಂದ ಹೇಳಿದರು.

ಬಿ.ಎಸ್ಸಿ. ಪದವಿ ಪಡೆದಿರುವ ಹರಿಯಾಣದ ಸುಶೀಲಾ, ‘ಎನ್‌ಸಿಸಿಯಲ್ಲಿದ್ದಾಗ ರೈಫಲ್‌ಗಳ ಬಗ್ಗೆ ತರಬೇತಿ ಪಡೆದಿದ್ದೆ. ದೇಶಕ್ಕಾಗಿ ದುಡಿಯುವಂತೆ ಪ್ರೋತ್ಸಾಹಿಸಿದ ನನ್ನ ತಂದೆ–ತಾಯಿಗೆ ಮೊದಲು ಸಲ್ಯೂಟ್‌ ಮಾಡುತ್ತೇನೆ’ ಎಂದು ಭಾವುಕರಾಗಿ ನುಡಿದರು.

‘ವಿಶ್ವಶಾಂತಿ ಪಾಲನಾ ಪಡೆಯಲ್ಲೂ ಸೇವೆ’: ‘ಸೇನೆಯಲ್ಲೂ ಮಹಿಳೆಯರು ಅಪಾರ ಕೊಡುಗೆ ನೀಡುತ್ತಿದ್ದಾರೆ. 2020ರ ಜನವರಿಯಲ್ಲಿ ಮಿಲಿಟರಿ ಪೊಲೀಸ್‌ಗೆ ಸೇರ್ಪಡೆಯಾಗಿ ತರಬೇತಿ ಪಡೆದ ಯುವತಿಯರು ವಿಶ್ವಶಾಂತಿ ಪಾಲನೆ ಪಡೆಯಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇಸ್ರೇಲ್‌, ಲೆಬನಾನ್‌ ಮುಂತಾದೆಡೆ ನಿಯೋಜಿಸಲಾಗಿದೆ’ ಎಂದು ಸಿಎಂಪಿ ಕಮಾಂಡಂಟ್‌ ಬ್ರಿಗೇಡಿಯರ್‌ ಜೋಶ್‌ ಅಬ್ರಹಾಂ ತಿಳಿಸಿದರು.

‘ಅಗ್ನಿಪಥ ಯೋಜನೆ ಜಾರಿಯಾದ ಬಳಿಕ ಈಗ ಮೊದಲ ಬಾರಿ ಅಗ್ನಿವೀರರಾಗಿ ಮಹಿಳಾ ಯೋಧರನ್ನು ನೇಮಿಸಿಕೊಂಡು ತರಬೇತಿ ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರು ಬೈಕ್‌ ಸಾಹಸ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ವಿವರಿಸಿದರು.

ಸೂರ್ಯ ಉದಯಿಸುವ ಮುನ್ನವೇ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಇವರ ತರಬೇತಿ ಚಟುವಟಿಕೆಗಳು ಆರಂಭವಾಗುತ್ತವೆ. ವಿವಿಧ ರೈಫಲ್‌ಗಳ ಬಳಕೆ, ಕಾರ್ಯಾಚರಣೆಗಳನ್ನು ಯಾವ ರೀತಿ ಕೈಗೊಳ್ಳಬೇಕು ಮತ್ತು ವಾಹನಗಳನ್ನು ಚಲಾಯಿಸುವುದು ಹೇಗೆ ಎನ್ನು
ವುದೂ ಸೇರಿದಂತೆ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. 31 ವಾರಗಳ ಕಾಲ ನಿರಂತರ ತರಬೇತಿ ಬಳಿಕ ಗಡಿ ಪ್ರದೇಶವೂ ಸೇರಿದಂತೆ ಸೇನೆಯ ವಿವಿಧ ಘಟಕಗಳಿಗೆನಿಯೋಜಿಸಲಾಗುತ್ತದೆ.

ಸುಮಾರು ಎರಡೂವರೆ ಲಕ್ಷ ಅರ್ಜಿ ಸಲ್ಲಿಸಿದವರಲ್ಲಿ ಈ 100 ಯುವತಿಯರನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ಆಯ್ಕೆಯಾಗಿರುವವರಲ್ಲಿ ಶೇ 50ಕ್ಕೂ ಹೆಚ್ಚು ಯುವತಿಯರು ಪದವೀಧರರು. ಬಿ.ಎ, ಬಿ.ಕಾಂ, ಬಿ.ಎಸ್ಸಿ ಪದವಿ ಪೂರೈಸಿದ್ದಾರೆ. ಇದೀಗ ಒಂದು ತಿಂಗಳು ತರಬೇತಿ ಪೂರ್ಣಗೊಳಿಸಿರುವ ಯುವತಿಯರು ತಮ್ಮ ಅನುಭವ ಮತ್ತು ಹಿನ್ನೆಲೆಬಿಚ್ಚಿಟ್ಟಿದ್ದಾರೆ.

‘ನನ್ನ ತಂದೆ ಕೃಷಿಕ. ಅಲ್ಪ ಜಮೀನು ಇದೆ. ನಾವು ಮೂವರು ಸಹೋದರಿಯರು. ನಾನೇ ಆಸಕ್ತಿ ವಹಿಸಿ ಸೇನೆ ಸೇರಲು ನಿರ್ಧರಿಸಿದೆ. ಸೇನೆ ಸೇರಿದರೆ ಕಷ್ಟ ಎಂದು ಹೇಳುತ್ತಿದ್ದರು. ಆದರೆ, ನಾನು ಛಲದಿಂದ ಸೇನೆ ಸೇರಿದೆ. ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇನೆ. ಈಗ ಎಲ್ಲರೂ ನನ್ನನ್ನು ಗೌರವಿಸುತ್ತಾರೆ. ತರಬೇತಿ ಕಠಿಣವಾಗಿದ್ದರೂ ಆನಂದಿಸುತ್ತಿದ್ದೇವೆ’ ಎಂದು ವಿಶಾಖಪಟ್ಟಣದ ಮಾಧವಿ ಹೆಮ್ಮೆಯಿಂದ ಹೇಳಿದರು.

100 ಯುವತಿಯರಲ್ಲಿ ಕರ್ನಾಟಕದಿಂದ ಆಯ್ಕೆಯಾದವರು ಶ್ರೀದೇವಿ ಮಾತ್ರ. ಉಡುಪಿಯ ಕುಂದಾಪುರದ ಶ್ರೀದೇವಿ ಅಧಿಕಾರಿಯಾಗುವ ಕನಸು ಕಂಡಿದ್ದರು. ಇದಕ್ಕಾಗಿ ಧಾರವಾಡಕ್ಕೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ಸಹ ಪಡೆಯುತ್ತಿದ್ದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಶ್ರೀದೇವಿ, ಸೇನೆ ಬಗ್ಗೆ ಮೊದಲಿನಿಂದಲೂ ಒಲವು ಹೊಂದಿದ್ದರು. ಬಿ.ಕಾಂ. ಪದವಿ ಪಡೆದಿರುವ ಅವರಿಗೆ ತಾವು ಕಂಡಿದ್ದ ಕನಸು ನನಸಾಗಿರುವುದಕ್ಕೆ ಸಂತಸವಿದೆ.

‘ಸೇನೆ ಸೇರಬೇಕು ಎನ್ನುವುದು ನನ್ನ ಕನಸು ಮತ್ತು ಗುರಿಯಾಗಿತ್ತು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವುದು ನನಗೆ ಇಷ್ಟ ಇರಲಿಲ್ಲ. ಸೇನೆ ಸೇರಿದ್ದಕ್ಕೆ ಹೆಮ್ಮೆಯಾಗಿದೆ. ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ತಂದೆ–ತಾಯಿ ನನಗೆ ಪ್ರೋತ್ಸಾಹಿಸಿದರು’ ಎಂದು ಹೆಮ್ಮೆಯಿಂದ ಹೇಳಿದರು.

ಬಿ.ಎಸ್ಸಿ. ಪದವಿ ಪಡೆದಿರುವ ಹರಿಯಾಣದ ಸುಶೀಲಾ, ‘ಎನ್‌ಸಿಸಿಯಲ್ಲಿದ್ದಾಗ ರೈಫಲ್‌ಗಳ ಬಗ್ಗೆ ತರಬೇತಿ ಪಡೆದಿದ್ದೆ. ದೇಶಕ್ಕಾಗಿ ದುಡಿಯುವಂತೆ ಪ್ರೋತ್ಸಾಹಿಸಿದ ನನ್ನ ತಂದೆ–ತಾಯಿಗೆ ಮೊದಲು ಸಲ್ಯೂಟ್‌ ಮಾಡುತ್ತೇನೆ’ ಎಂದು ಭಾವುಕರಾಗಿ ನುಡಿದರು.

ಬೆಂಗಳೂರಿನ ಕೋರ್‌ ಮಿಲಿಟರಿ ಪೊಲೀಸ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ ಯುವತಿಯರ ತಂಡ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಬೆಂಗಳೂರಿನ ಕೋರ್‌ ಮಿಲಿಟರಿ ಪೊಲೀಸ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ ಯುವತಿಯರ ತಂಡ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.

ವಿಶ್ವಶಾಂತಿ ಪಾಲನಾ ಪಡೆಯಲ್ಲೂ ಸೇವೆ: ಜೋಶ್‌ ಅಬ್ರಹಾಂ
‘ಸೇನೆಯಲ್ಲೂ ಮಹಿಳೆಯರು ಅಪಾರ ಕೊಡುಗೆ ನೀಡುತ್ತಿದ್ದಾರೆ. 2020ರ ಜನವರಿಯಲ್ಲಿ ಮಿಲಿಟರಿ ಪೊಲೀಸ್‌ಗೆ ಸೇರ್ಪಡೆಯಾಗಿ ತರಬೇತಿ ಪಡೆದ ಯುವತಿಯರು ವಿಶ್ವಶಾಂತಿ ಪಾಲನೆ ಪಡೆಯಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇಸ್ರೇಲ್‌, ಲೆಬನಾನ್‌ ಮುಂತಾದೆಡೆ ನಿಯೋಜಿಸಲಾಗಿದೆ’ ಎಂದು ಸಿಎಂಪಿ ಕಮಾಂಡಂಟ್‌ ಬ್ರಿಗೇಡಿಯರ್‌ ಜೋಶ್‌ ಅಬ್ರಹಾಂ ತಿಳಿಸಿದರು.

‘ಅಗ್ನಿಪಥ ಯೋಜನೆ ಜಾರಿಯಾದ ಬಳಿಕ ಈಗ ಮೊದಲ ಬಾರಿ ಅಗ್ನಿವೀರರಾಗಿ ಮಹಿಳಾ ಯೋಧರನ್ನು ನೇಮಿಸಿಕೊಂಡು ತರಬೇತಿ ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರು ಬೈಕ್‌ ಸಾಹಸ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ವಿವರಿಸಿದರು.

*
ತರಬೇತಿಯಲ್ಲಿ ಯುವತಿಯರಿಗೆ ಯಾವುದೇ ವಿನಾಯಿತಿ ನೀಡುತ್ತಿಲ್ಲ. 31 ವಾರಗಳಲ್ಲಿ ಮಿಲಿಟರಿ ಪೊಲೀಸ್‌ ಕುರಿತು ಎರಡು ಹಂತದ ತರಬೇತಿ ನೀಡಲಾಗುತ್ತಿದೆ.
-ಮೇಜರ್‌ ವ್ಯಾಲೆಂಟಿನಾ ಜೆ. ಡಾಮೆಲೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT