ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಕಲಹ: ಮೂವರ ಆತ್ಮಹತ್ಯೆ

Last Updated 29 ಜನವರಿ 2021, 17:17 IST
ಅಕ್ಷರ ಗಾತ್ರ

ಸಂತೇಬೆನ್ನೂರು (ಚನ್ನಗಿರಿ ತಾ.): ಕೌಟುಂಬಿಕ ಕಲಹದ ಕಾರಣ ತಾಯಿ, ಮಗಳು, ಮಗ ಬುಧವಾರ ಸಮೀಪದ ಸೂಳೆಕೆರೆಯ ಭದ್ರಾ ನಾಲೆಗೆ ಹಾರಿದ್ದು, ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

ಮಗಳ ಮೃತದೇಹ ಗುರುವಾರ ಸಂತೇಬೆನ್ನೂರು ಸಮೀಪದ ಮೆದಿಕೆರೆ ಬಳಿ ಹಾಗೂ ಮಗನ ಮೃತದೇಹ ಶುಕ್ರವಾರ ಯಕ್ಕೆಗೊಂದಿ ಭದ್ರಾ ನಾಲೆ ಯಲ್ಲಿ ಸಿಕ್ಕಿದೆ. ತಾಯಿಯ ದೇಹದ ಶೋಧ ನಡೆದಿದೆ.

ನಿವೃತ್ತ ಶಿಕ್ಷಕ ರಾಜಪ್ಪ ಅವರ ಪತ್ನಿ ಕಮಲಮ್ಮ (50), ಮಗಳು ಶ್ರುತಿ (24) ಹಾಗೂ ಮಗ ಸಂಜಯ್ (20) ಆತ್ಮಹತ್ಯೆ ಮಾಡಿಕೊಂಡವರು. ಇವರು ಚನ್ನಗಿರಿ ಸಮೀಪದ ಮರವಂಜಿ ಗ್ರಾಮದವರು.

ರಾಜ್ಯಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಮುಗಿಸಿದ್ದ ಮಗಳಿಗೆ ತಂದೆ ರಾಜಪ್ಪ ಸೂಕ್ತ ವರ ನೋಡುತ್ತಿದ್ದರು. ಬಂದ ಸಂಬಂಧಗ ಳನ್ನು ಮಗಳು ಒಪ್ಪದ ಕಾರಣ ಕುಟುಂಬದಲ್ಲಿ ಮನಸ್ತಾಪ ಉಂಟಾಗಿತ್ತು. ಇದರಿಂದ ನೊಂದ ತಾಯಿ, ಮಗಳು ಬುಧ ವಾರ ಮನೆಯಿಂದ ನಾಪತ್ತೆಯಾಗಿದ್ದರು. ಇವರನ್ನು ಹುಡುಕುತ್ತ ಬಂದ ಮಗನೂ ಅವರೊಂದಿಗೆ ನಾಲೆಗೆ ಹಾರಿದ್ದಾನೆ. ಸಂಜಯ್ ಎಂಜಿನಿಯರಿಂಗ್‌ ಪದವೀಧ ರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT