ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ, ತಿರುಪತಿಗೆ ಪ್ರವಾಸಿ ಬಸ್‌

Last Updated 12 ನವೆಂಬರ್ 2020, 18:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರವಾಸಿಗರಿಗೆ ಹಾಗೂ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಸುಸಜ್ಜಿತ ಮತ್ತು ಹವಾನಿಯಂತ್ರಿತ ಡಿಲಕ್ಸ್ ವಾಹನ ಅಥವಾ ಬಸ್‌ ಸೇವೆ ಆರಂಭಿಸಿದೆ.

ಪ್ರತಿದಿನ ರಾತ್ರಿ ಬೆಂಗಳೂರಿನಿಂದ ವಾಹನ ಹೊರಡಲಿದ್ದು, ನ.12ರಿಂದಲೇ ಈ ಸೇವೆ ಆರಂಭವಾಗಿದೆ.

ಈ ಸೇವೆ ಪಡೆಯಲು ಬಯಸುವ ಪ್ರವಾಸಿಗರು ಯಶವಂತಪುರ ಕೇಂದ್ರ ಕಚೇರಿ ಹಾಗೂ ಕೆಂಪೇಗೌಡ ಬುಕ್ಕಿಂಗ್ ಕೇಂದ್ರ ಹಾಗೂ ರೆಡ್‌ಬಸ್‌ ಪೋರ್ಟಲ್‌ ಮೂಲಕ ಆಸನ ಕಾಯ್ದಿರಿಸಬಹುದು. ಅಲ್ಲದೆ, ನಿಗಮದ ಅಧಿಕೃತ ಟ್ರಾವೆಲ್‌ ಏಜೆಂಟರ ಮೂಲಕವೂ ಟಿಕೆಟ್‌ ಕಾಯ್ದಿರಿಸಬಹುದಾಗಿದೆ. ಪ್ರತಿದಿನ ರಾತ್ರಿ 9ಕ್ಕೆ ಬೆಂಗಳೂರಿನಿಂದ ಹಾಗೂ ವಾಪಸ್ ಬರುವವರಿಗೆ ಆಯಾ ಧಾರ್ಮಿಕ ಸ್ಥಳಗಳಿಂದ ಬಸ್‌ ಹೊರಡಲಿವೆ.

ಆನ್‌ಲೈನ್‌ ಬುಕ್ಕಿಂಗ್‌ಗೆ www.kstdc.co ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ– 0804334 4334/35, 8970650070 / 8970650075.

ಧಾರ್ಮಿಕ ಸ್ಥಳ: ಏಕಮುಖ ಪ್ರಯಾಣ ದರ

ತಿರುಪತಿ;₹400

ಕೊಲ್ಲೂರು;₹500

ಧರ್ಮಸ್ಥಳ;₹400

ಹಂಪಿ;₹500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT