ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಟಿ.ಪಿ. ವಿಜಯ್‌ ನೂತನ ಕುಲಪತಿ

Last Updated 21 ಫೆಬ್ರುವರಿ 2023, 1:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಟಿ.ಪಿ. ವಿಜಯ್‌ ನೇಮಕಗೊಂಡಿದ್ದಾರೆ.

ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರ ಅಧಿಕಾರದ ಅವಧಿ ಫೆ. 21ರಂದು ಕೊನೆಗೊಳ್ಳಲಿದೆ. ಇವರ ಅಧಿಕಾರದ ಅವಧಿಯ ಕೊನೆಯ ದಿನದಂದೇ ಜಾರಿಗೆ ಬರುವಂತೆ ವಿಜಯ್‌ ಅವರನ್ನು ಕುಲಪತಿಯಾಗಿ ನೇಮಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಆದೇಶ ಹೊರಡಿಸಿದ್ದಾರೆ.

‘2019ರ ಫೆಬ್ರುವರಿ 20ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ರಮೇಶ ಅವರನ್ನು ಕುಲಪತಿಯಾಗಿ ನೇಮಿಸಲಾಗಿತ್ತು. ಪುನಃ 2022ರ ಫೆ.22ರಂದು ಒಂದು ವರ್ಷ ಅಧಿಕಾರದ ಅವಧಿ ವಿಸ್ತರಿಸಲಾಗಿತ್ತು. ಪೂರ್ಣಾವಧಿಗೆ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹಂಪಿ ಕನ್ನಡ ವಿ.ವಿ. 1991ರ ಅಧಿನಿಯಮ ಸೆಕ್ಷನ್‌ 13(4)ರ ಪ್ರಕಾರ, ಮುಂದಿನ ಆದೇಶದ ವರೆಗೆ ಟಿ.ಪಿ. ವಿಜಯ್‌ ಅವರನ್ನು ಕುಲಪತಿ ಹುದ್ದೆಗೆ ನೇಮಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಟಿ.ವಿ. ವಿಜಯ್‌ ಅವರು ಸದ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಈ ಹಿಂದೆ ಕುಲಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ ಇದೆ. ಸಿಬ್ಬಂದಿಗೆ ಕಿರುಕುಳ, ಮುಂಬಡ್ತಿ, ಹುದ್ದೆಗಳ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆ ಎಂಬ ಆರೋಪಗಳು ರಮೇಶ ವಿರುದ್ಧ ಕೇಳಿ ಬಂದಿದ್ದವು. ಹಲವರು ಅವರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT