ಮಂಗಳವಾರ, ಆಗಸ್ಟ್ 9, 2022
21 °C

ಮೈಸೂರು– ಬೆಂಗಳೂರು ರೈಲುಗಳ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌ ಲಾಕ್‌ಡೌನ್‌ ನಿಮಿತ್ತ ಪ್ರಯಾಣಿಕರ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೈಸೂರು– ಬೆಂಗಳೂರು ನಡುವಿನ ಮೆಮು ಎಕ್ಸ್‌ಪ್ರೆಸ್‌ ಸೇರಿದಂತೆ ಕೆಲವೊಂದು ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗ ಪುನರಾರಂಭಿಸಿದೆ.

ರಾಜ್ಯರಾಣಿ ಎಕ್ಸ್‌ಪ್ರೆಸ್‌ (ಗಾಡಿ ಸಂಖ್ಯೆ 06567/ 06568), ಚಾಮುಂಡಿ ಎಕ್ಸ್‌ಪ್ರೆಸ್‌ (06569/ 06570), ರೈಲು ಸಂಖ್ಯೆ 06559, 06560, ಮತ್ತು ಟಿಪ್ಪು ಎಕ್ಸ್‌ಪ್ರೆಸ್‌ (06201/ 06202) ರೈಲುಗಳು ಮೈಸೂರು– ಬೆಂಗಳೂರು ನಡುವೆ ಪ್ರತಿದಿನ ಸಂಚಾರ ರಂಭಿಸಿವೆ.

ಮೈಸೂರು– ಬಾಗಲಕೋಟೆ ನಡುವಿನ ಬಸವ ಎಕ್ಸ್‌ಪ್ರೆಸ್‌ (07307/ 07308) ರೈಲು ಸಂಚಾರ ಜೂನ್‌ 20 ರಿಂದ ಆರಂಭವಾಗಲಿದೆ. ಮೈಸೂರು– ಕೊಚ್ಚುವೇಳಿ (06316/ 06315) ನಡುವಿನ ರೈಲು ಸಂಚಾರ ಜೂನ್‌ 16 ರಿಂದಲೇ ಸೇವೆ ಆರಂಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು