ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಬಸ್‌ ವಾಪಸ್

Last Updated 23 ಫೆಬ್ರುವರಿ 2021, 22:32 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಳೂರ್ಗಿ–ಮಾಶಾಳ ಗ್ರಾಮದ ಗಡಿಯಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಕೆಲ ಖಾಸಗಿ ವಾಹನಗಳನ್ನು ಮಂಗಳವಾರ ವಾಪಸ್ ಕಳಿಸಲಾಯಿತು.

‘ಬಳೂರ್ಗಿ–ಮಾಶಾಳ ಗಡಿಯ ಮೂಲಕ ಮಹಾರಾಷ್ಟ್ರದಿಂದ ನಿತ್ಯ ಐವತ್ತಕ್ಕೂ ಹೆಚ್ಚು ಬಸ್‌ಗಳು ಸಂಚಾರ ಮಾಡುತ್ತಿದ್ದವು. ನಮ್ಮ ಚೆಕ್‌ಪೋಸ್ಟ್‌ನಲ್ಲಿ ಕೋವಿಡ್ ಪರೀಕ್ಷೆಯ ‍ಪ್ರಮಾಣಪತ್ರ ಕೇಳುತ್ತಿರುವುದರಿಂದ ಮಧ್ಯಾಹ್ನದ ಬಳಿಕ ಬಸ್‌ಗಳು ಬರಲಿಲ್ಲ’ ಎಂದು ಅಫಜಲ‍ಪುರ ತಹಶೀಲ್ದಾರ್ ನಾಗಮ್ಮಎಂ.ಕೆ. ತಿಳಿಸಿದರು.

ಮಹಾರಾಷ್ಟ್ರದ ಬಸ್‌ಗಳಿಗೆ ನಿರ್ಬಂಧ ವಿಧಿಸುವ ನಿರ್ಧಾರ ಕೈಗೊಂಡಿಲ್ಲ ಎಂದುಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾಪ್ರತಿಕ್ರಿಯಿಸಿದರು.

‘ಕೋವಿಡ್‌ ನೆಗೆಟಿವ್ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಟಿಕೆಟ್ ಕೊಡುವಂತೆ ಮಹಾರಾಷ್ಟ್ರದ ರೈಲ್ವೆ ವಲಯದ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇವೆ’ ಎಂದು ಕಲಬುರ್ಗಿಯ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳಹೇಳಿದರು.

‘ರೈಲಿನಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ತಪಾಸಣೆಗೆ ಬೀದರ್‌ನಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಮುಂಬೈ, ಪುಣೆಯಿಂದ ಬರುತ್ತಿರುವವರ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ದಾಖಲೆ
ಗಳು ಇಲ್ಲದಿದ್ದರೆ ಮರಳಿ ಕಳಿಸಲಾಗುತ್ತಿದೆ’ ಎಂದು ಬೀದರ್‌ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

ಕೇರಳದಿಂದ ಬರುವವರಿಗೆ 3 ದಿನ ವಿನಾಯಿತಿ

ಮಂಗಳೂರು: ಕೇರಳದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮೂರು ದಿನಗಳ ವಿನಾಯಿತಿ ನೀಡಿದೆ. ಇದರಿಂದಾಗಿ ತಲಪಾಡಿ ಗಡಿಯಲ್ಲಿ ಗಡಿನಾಡ ಕನ್ನಡಿಗರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ‘ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ತೊಂದರೆ ಆಗಬಾರದು. ಪ್ರತಿಭಟನಕಾರರಿಗೆ ಮನವರಿಕೆ ಮಾಡಿ ಮೂರು ದಿನ ವಿನಾಯಿತಿ ಕೊಟ್ಟಿದ್ದೇವೆ’ ಎಂದು ತಿಳಿಸಿದರು.

‘ಮೂರು ದಿನಗಳಲ್ಲಿ ನೆಗೆಟಿವ್ ವರದಿಯೊಂದಿಗೆ ಬನ್ನಿ. 3 ದಿನಗಳ ನಂತರ ವರದಿ ತರದೇ ಇದ್ದರೆ ಗಡಿಯಿಂದ ವಾಪಸ್ ಕಳುಹಿಸುತ್ತೇವೆ. ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ಹೋಗಿ ವರದಿ ತೆಗೆದುಕೊಂಡು ಬರಬೇಕು. ಗಂಟಲು ದ್ರವ ಪರೀಕ್ಷೆಗೆ ಕೊಟ್ಟವರು ವರದಿ ಬಾರದೇ ಇದ್ದರೂ, ಮೊಬೈಲ್‌ಗೆ ಬಂದ ಮೆಸೇಜ್ ತೋರಿಸಬೇಕು. ನಿತ್ಯದ ಪ್ರಯಾಣಿಕರು ಪ್ರತಿ 14 ದಿನಕ್ಕೊಮ್ಮೆ ವರದಿ ತರಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT