ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಬಿಪಿಯಿಂದ ಎಕೆ47 ರೈಫಲ್ ಕಳವು; ಬೆಚ್ಚಿದ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು

ತಡರಾತ್ರಿಯೇ ಎಫ್ಐಆರ್
Last Updated 18 ಆಗಸ್ಟ್ 2022, 19:21 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹಾಲಭಾವಿಯಲ್ಲಿರುವ ಇಂಡೊ ಟಿಬೆಟನ್ ಗಡಿ ಪೂಲೀಸ್(ಐಟಿಬಿಪಿ) ಕ್ಯಾಂಪಿನಿಂದ ಬುಧವಾರ ರಾತ್ರಿ ಎರಡು ಎಕೆ-47 ರೈಫಲ್‌ಗಳು ಕಳವಾಗಿವೆ.

ಮಧುರೈನ 45ನೇ ಬಟಾಲಿಯನ್ ನಿಂದ ಇಲ್ಲಿನ ಕ್ಯಾಂಪಿಗೆ ಎಂಟುವಾರಗಳವರೆಗೆ ನಕ್ಸಲ್ ನಿಗ್ರಹ ತರಬೇತಿಗಾಗಿ ಬಂದಿರುವ ರಾಜೇಶಕುಮಾರ್ ಹಾಗೂ ಸಂದೀಪ್ ಮೀನಾ ಅವರಿಗೆ ನೀಡಿದ್ದರೈಫಲ್ಲುಗಳನ್ನು ಕಳ್ಳತನ ಮಾಡಲಾಗಿದೆ.

ಐಟಿಬಿಪಿಯು ಜುಲೈ 29ರಿಂದ ಇಲ್ಲಿ ತರಬೇತಿ ಶಿಬಿರ ನಡೆಸುತ್ತಿದೆ. ಆಗಸ್ಟ್ 17ರಂದು ರಾತ್ರಿ ಈ ಇಬ್ಬರೂ ಸಿಬ್ಬಂದಿ ಬರಾಕಿನ ಮೂರನೇ ಮಹಡಿಯಲ್ಲಿ ಈ ರೈಫಲ್ಲುಗಳನ್ನು ಇಟ್ಟು ಮಲಗಿದ್ದಾಗ ಕಳ್ಳತನವಾಗಿವೆ ಎಂದು ಕಾಕತಿ ಠಾಣೆಗೆ ದೂರು ನೀಡಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ಹಿರಿಯ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಅಷ್ಟೊಂದು ಬಿಗಿ ಭದ್ರತೆಯ ನಡುವೆಯೂ ಒಳನುಗ್ಗಿದ ಕಳ್ಳರು ಅತ್ಯಾಧುನಿಕ ಅಸ್ತ್ರಗಳನ್ನು ಎಗರಿಸಿದ್ದು ಅಚ್ಚರಿ ಮೂಡಿಸಿದೆ.

ಗುರುವಾರ ತಡರಾತ್ರಿಯೇ ಕಾಕತಿ ಪೊಲೀಸರು ವಿಶೇಷ ತಂಡ ಕಟ್ಟಿಕೊಂಡು ಹುಡುಕಾಟ ನಡೆಸಿದ್ದಾರೆ.

ಡಿವೈಎಸ್ಪಿ (ಅಪರಾಧ) ಪಿ.ವಿ.ಸ್ನೇಹಾ, ಎಸಿಪಿ ಎಸ್.ವಿ.ಗಿರೀಶ್, ಇನ್ ಸ್ಪೆಕ್ಟರ್ ಐ.ಎಸ್.ಗುರುನಾಥ ಅವರು ಶೋಧನಾ ತಂಡದ ನೇತೃತ್ವ ವಹಿಸಿದ್ದಾರೆ.

ಈ ಬಗ್ಗೆಯ ಐಟಿಬಿಪಿ ಅಧಿಕಾರಿಗಳು ಗುರುವಾರ ತಡರಾತ್ರಿಯೇ 'ಶಸ್ತ್ರಾಸ್ತ್ರ ಕಾಯ್ದೆ 1/ಎ, 1/ಎಎ' ಹಾಗೂ ಐಪಿಸಿ 380 ಕಲಂಗಳ ಅಡಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT