ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ ನಿರಾಕರಣೆ ಚಳವಳಿ’ಗೆ ಎರಡು ದಶಕ

ಗ್ರಾಮದಲ್ಲಿರುವ ಎಲ್ಲರೂ ರೈತರೇ: ಪ್ರತಿ ಮನೆಯಲ್ಲಿ ಸರಾಸರಿ ₹ 1 ಲಕ್ಷ ವಿದ್ಯುತ್ ಬಿಲ್ ಬಾಕಿ
Last Updated 22 ನವೆಂಬರ್ 2020, 19:45 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ತಿಮ್ಮಲಾಪುರ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಲಕ್ಷ್ಮಗೊಂಡನಹಳ್ಳಿಯ ‘ಕರ ನಿರಾಕರಣೆ’ ಚಳವಳಿ ಎರಡು ದಶಕ ಪೂರೈಸಿದೆ.

ಈ ಎರಡೂ ಹಳ್ಳಿಗಳಲ್ಲಿ 20 ವರ್ಷಗಳಿಂದ ‘ವಿದ್ಯುತ್ ಕರ ನಿರಾಕರಣೆ’ ಚಳವಳಿ ನಡೆಯುತ್ತಿದೆ. ಅಂದಾಜು ತಲಾ 70 ಮನೆಗಳಿರುವ ಈ ಗ್ರಾಮಗಳಲ್ಲಿ ವಾಸಿಸುತ್ತಿರುವ ಎಲ್ಲರೂ ರೈತ ಕುಟುಂಬಗಳು.

ಪ್ರತಿ ಮನೆಯಲ್ಲಿಯೂ ಸರಾಸರಿ ₹ 1 ಲಕ್ಷ ಗೃಹೋಪಯೋಗಿ ವಿದ್ಯುತ್ ಬಿಲ್ ಬಾಕಿ ಇದೆ. ಕೆಲವು ಕುಟುಂಬಗಳು ₹1.75 ಲಕ್ಷದ ವರೆಗೆ ಬಾಕಿ ಉಳಿಸಿಕೊಂಡಿದ್ದು, ಇದು ಗರಿಷ್ಠ ಮೊತ್ತವಾಗಿದೆ.

ಕೃಷ್ಣ ಕಾಲದ ಇತಿಹಾಸ:ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ (2000ನೇ ಇಸವಿ) ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ತಾರತಮ್ಯ ಮಾಡಲಾಗುತ್ತದೆ ಎಂಬುವುದು ರೈತರಆರೋಪವಾಗಿತ್ತು.

ವಿದ್ಯುತ್‌ ಉತ್ಪಾದನೆಯ ಬಹುಪಾಲು ನಗರಕ್ಕೆ ಮತ್ತು ಹಳ್ಳಿಗಳಿಗೆ ಕಡಿಮೆ ಪ್ರಮಾಣದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂಬ ಆಕ್ರೋಶ ಅವರಲ್ಲಿ ಮಡುಗಟ್ಟಿತ್ತು.ಈ ತಾರತಮ್ಯ ನೀತಿ ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ಎರಡೂ ಗ್ರಾಮಗಳ ಜನರು ‘ವಿದ್ಯುತ್ ಕರ ನಿರಾಕರಣೆ’ ಚಳವಳಿ ಆರಂಭಿಸಿದರು.

ಹೋರಾಟಕ್ಕೆ ಧುಮುಕಿದ ಎಂಡಿಎನ್‌:ಈ ಜನ ಚಳಚಳಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಗಮನ ಸೆಳೆದಿತ್ತು. ಹೋರಾಟದ ಭಾಗವಾಗಿ 2002ರಲ್ಲಿ ಕೆ.ಬಿ.ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು.

ಗ್ರಾಮಗಳ ಭಾಗ್ಯಜ್ಯೋತಿ ಫಲಾನುಭವಿಗಳ ಮನೆಗಳಿಗೂ ಮೀಟರ್ ಅಳವಡಿಸಲು ರೈತ ಸಂಘ ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ಯೋಜನೆಯಡಿ ಸೌಲಭ್ಯ ಪಡೆಯುವವರು ಬಡವರು. ಭಾಗ್ಯಜ್ಯೋತಿ ಮೀಟರ್ ಅಳವಡಿಸುವ ಕಂಪನಿಗಳು ಆಗಾಗ್ಗೆ ಮೀಟರ್ ಬದಲಿಸುತ್ತವೆ. ಈ ಮೀಟರ್‌ಗೆ ಹಣ ನೀಡಲು ಬಡವರಿಗೆ ಸಾಧ್ಯವಿಲ್ಲ ಎಂದು ರೈತ ಮುಖಂಡರು ತಡೆಯೊಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT