ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಪಿ 3: ಭೂ ಪರಿಹಾರ ಹೆಚ್ಚಿಸಲು ನಿರ್ಧಾರ: ಸಚಿವ ಅಶೋಕ

Last Updated 29 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) 3ನೇ ಹಂತಕ್ಕೆ ಈವರೆಗೆ ‌ಸ್ವಾಧೀನಪಡಿಸಿಕೊಂಡ 50 ಸಾವಿರ ಎಕರೆ ಭೂಮಿಗೆ ಪರಿಹಾರ ನೀಡಬೇಕಿದೆ. ರೈತರ ಆಗ್ರಹದಂತೆ, ವಿಶೇಷ ಪ್ರಕರಣವೆಂದು ಭಾವಿಸಿ ಹೆಚ್ಚಿಸಲು ಪರಿಹಾರ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಸಂಪುಟ ಉಪ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ‘ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವುದರಿಂದ ಮುಳುಗಡೆ ಆಗಲಿರುವ ಭೂಮಿಗೆ ಸದ್ಯ ಎಕರೆಗೆ ₹ 1.5 ಲಕ್ಷ ಪರಿಹಾರವಿದೆ. ಮೂರು ಪಟ್ಟು ಅಂದರೆ, ₹ 8 ಲಕ್ಷದಷ್ಟು ಆಗಬಹುದು. ಆದರೆ, ರೈತರು ಇನ್ನೂ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದರು.

‘ಮಾನವೀಯತೆಯ ದೃಷ್ಟಿಯಿಂದ ಪರಿಹಾರ ಮೊತ್ತ ಹೆಚ್ಚಿಸಲು ತೀರ್ಮಾನಿಸಿದ್ದು, ಇನ್ನೊಂದು ಸಭೆ ಮಾಡಿ, ಪರಿಹಾರ ಎಷ್ಟು ಕೊಡಬೇಕೆಂದು ನಿರ್ಧರಿಸಲಾಗುವುದು. ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT