ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಮಂದಿಗೆ ವಾಲ್ಮೀಕಿ‌ ಪ್ರಶಸ್ತಿ

Last Updated 8 ಅಕ್ಟೋಬರ್ 2022, 8:28 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಮಂದಿಯನ್ನು ಆಯ್ಕೆ ಮಾಡಿದ್ದು, ಭಾನುವಾರ ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆ.ಆರ್. ಪುರದ ಶ್ರೀ ಮಹರ್ಷಿ ವಾಲ್ಮೀಕಿ ಆಧಿ ಗುರುಪೀಠದ ಸಂಸ್ಥಾಪಕ ಎಲ್. ಮುನಿಸ್ವಾಮಿ (ಸಾಮಾಜಿಕ ಕ್ಷೇತ್ರ), ಚಿಕ್ಕಬಳ್ಳಾಪುರದ ಎನ್. ನಾಗಪ್ಪ (ಇತರ ಕ್ಷೇತ್ರ), ಧಾರವಾಡದ ನಾಗಪ್ಪ ಎಚ್. ಕೋಣಿ (ಇತರ ಕ್ಷೇತ್ರ), ಕೂಡ್ಲಿಗಿಯ ಪಿ. ಪದ್ಮಾ (ಕಲಾ ಕ್ಷೇತ್ರ), ಮೈಸೂರಿನ ಸುಭಾಷ್ ಎಸ್.ಎಚ್. (ಸಾಮಾಜಿಕ ಕ್ಷೇತ್ರ) ಮತ್ತು ಬಳ್ಳಾರಿಯ ಉಷಾರಾಣಿ (ಕಲೆ ಮತ್ತು ಸಮಾಜ ಸೇವೆ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಡಾ. ಕಡ್ಲಬಾಳ ಪನ್ನಂಗಧರ ಅಧ್ಯಕ್ಷತೆಯ ಆಯ್ಕೆ ಸಮಿತಿ ಪುರಸ್ಕೃತರನ್ನು ಆಯ್ಕೆಮಾಡಿದೆ ಎಂದರು.

ಪ್ರಶಸ್ತಿಯು ತಲಾ ₹5 ಲಕ್ಷ ನಗದು ಮತ್ತು 20 ಗ್ರಾಂ. ಚಿನ್ನದ ಪದಕವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT