ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಯಕ ತೊರವಿಗೆ ‘ಪುರಂದರ ಸಂಗೀತರತ್ನ’ ಪ್ರಶಸ್ತಿ

Last Updated 22 ನವೆಂಬರ್ 2021, 19:05 IST
ಅಕ್ಷರ ಗಾತ್ರ

ಬೆಂಗಳೂರು: ಕೀರ್ತನೆಗಳ ಗಾಯನದ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪಂಡಿತ್‌ ವಿನಾಯಕ ತೊರವಿ ಅವರು 2022ನೇ ಸಾಲಿನ ‘ನಿರ್ಮಾಣ್‌–ಪುರಂದರ ಸಂಗೀತರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ದಾಸ ಸಾಹಿತ್ಯ ಹಾಗೂ ದಾಸರ ‍ಪದಗಳ ಹಿರಿಮೆ ಹೆಚ್ಚಿಸುವ ಸಲುವಾಗಿ ವಿ. ಲಕ್ಷ್ಮೀನಾರಾಯಣ ಅವರು ವಿ.ಎಲ್‌.ಎನ್‌. ನಿರ್ಮಾಣ್‌ ಪುರಂದರ ಪ್ರತಿಷ್ಠಾನ ಆರಂಭಿಸಿದ್ದಾರೆ. ಸಂಸ್ಥೆಯು ನಾಡಿನ ಪ್ರಸಿದ್ಧ ಸಂಗೀತಗಾರರನ್ನು ಗುರುತಿಸಿ ಅವರಿಗೆಸತತ 12 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ವಿದ್ಯಾಭೂಷಣ ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ವಿ. ಲಕ್ಷ್ಮೀನಾರಾಯಣ ಅವರನ್ನೊಳಗೊಂಡ ಆಯ್ಕೆ ಸಮಿತಿಯುವಿನಾಯಕ ತೊರವಿಯವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ₹1 ಲಕ್ಷ ನಗದು, ಪುರಂದರ ದಾಸರ ಚಿತ್ರವಿರುವ ಸ್ವರ್ಣಹಾರ ಹಾಗೂ ಅಭಿನಂದನಾ ಪತ್ರ ಹೊಂದಿರಲಿದೆ’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT