ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಗದ್ದಲ; 12 ಸಂಸದರ ಅಮಾನತು ಕ್ರಮ ಸ್ವಾಗತಿಸಿದ ಕಾಗೇರಿ

Last Updated 2 ಡಿಸೆಂಬರ್ 2021, 9:42 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯಸಭೆಯಲ್ಲಿ ಗದ್ದಲದ ವಿಚಾರಕ್ಕೆ 12 ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸದ್ಯ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಡೆಯುತ್ತಿರುವ ಘಟನೆಗಳು ಸ್ಪೀಕರ್‌ ಆದ ನನಗೆ ವೈಯಕ್ತಿಕವಾಗಿ ನೋವು ತಂದಿವೆ. ಕಳೆದ ಲೋಕಸಭಾ ಅಧಿವೇಶನದಲ್ಲಿ ನಡೆದ ಘಟನೆ ಖಂಡಿಸಿ ಪತ್ರ ಬರೆದಿದ್ದೆ. ರಾಜ್ಯಸಭೆಯಲ್ಲೇ ಹೀಗಾದರೆ, ವಿಧಾನಸಭೆಯಲ್ಲಿ ಹೇಗೆ ನಡೆಯಬಹುದೆಂಬ ಆತಂಕ ವ್ಯಕ್ತಪಡಿಸಿದ್ದೆ’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಬೇಕಾದವರೆ ಶಿಸ್ತು ಉಲ್ಲಂಘಿಸುವುದು ಸಮಂಜಸವಲ್ಲ. ರಾಜಕೀಯ ಹಾಗೂ ತತ್ವ–ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಅಶಿಸ್ತಿನಿಂದ ವರ್ತಿಸುವುದು ಯಾರಿಗೂ ಶೋಭೆ ತರುವುದಿಲ್ಲ. ನಮ್ಮ ನಡವಳಿಕೆ ಚೌಕಟ್ಟಿನಲ್ಲಿರಬೇಕು. ಸದನದಲ್ಲಿ ನಡೆಯುವ ಚರ್ಚೆಗಳು ರಚನಾತ್ಮಕವಾಗಿರಬೇಕು. ನಿಯಮ ಮೀರಿ ವರ್ತಿಸಿದರೆ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಶಾಸಕರಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT