ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಜಲ ಹಾಕಿ ವಿಧಾನಸೌಧ ತೊಳೆಯುತ್ತೇವೆ: ಡಿಕೆಶಿ

Last Updated 24 ಜನವರಿ 2023, 21:50 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸರ್ಕಾರ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು ವಿಧಾನಸೌಧದಿಂದ ಗಂಟುಮೂಟೆ ಕಟ್ಟಿಕೊಂಡು ಹೊರಡಲಿ. ನಾವು ಗಂಜಲ ತಂದು ವಿಧಾನಸೌಧವನ್ನು
ಶುದ್ಧ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಜನರ ಹೃದಯ ತಲುಪುವ ಯೋಜನೆಗಳನ್ನು ಪಕ್ಷ ಘೋಷಿಸಿರುವುದರ ಬಗ್ಗೆ ಬಿಜೆಪಿಯವರು ಸಂಕಟದಿಂದ ಅಪಸ್ವರ ಎತ್ತಿದ್ದಾರೆ. ಸರ್ಕಾರದ ಆಯಸ್ಸು ಇನ್ನು 40 ದಿನ ಮಾತ್ರ. ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೊ ಅದನ್ನು ಮಾಡಿಕೊಂಡು ಟೆಂಟ್ ಖಾಲಿ ಮಾಡಿ’ ಎಂದು ಬಿಜೆಪಿಯವರನ್ನು ಉದ್ದೇಶಿಸಿ ಹೇಳಿದರು.

‘ಸಚಿವ ಸುಧಾಕರ್ ಅವರ ತಲೆ ಮೇಲೆ ಭ್ರಷ್ಟಾಚಾರ ಆರೋಪಗಳ ಪರ್ವತವೇ ಇದೆ. ಆದರೂ ಮಾಧುಸ್ವಾಮಿ, ಮುಖ್ಯಮಂತ್ರಿ ಯಾಕೆ ಮಾತನಾಡುತ್ತಿಲ್ಲ? ಆಪರೇಷನ್ ಕಮಲದಿಂದ ಬಂದವರಿಂದಲೇ ಮಾತನಾಡಿಸುತ್ತಿರುವುದೇಕೆ? ನಾವು ಅವರನ್ನು ಮರಳಿ ಪಕ್ಷಕ್ಕೆ ತೆಗೆದುಕೊಳ್ಳುವು ದಿಲ್ಲ’ ಎಂದರು.

‘ರಾಮನಗರದಲ್ಲಿ ಇದೇ 27ರಂದು ನಡೆಯಬೇಕಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT