ಶನಿವಾರ, ಜನವರಿ 28, 2023
21 °C

ಮುರುಡೇಶ್ಚರಕ್ಕೆ ಸಾಪ್ತಾಹಿಕ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಯಾಣಿಕರ ಬೇಡಿಕೆ ಮೇರೆಗೆ ಯಶವಂತಪುರ-ಮುರುಡೇಶ್ವರ ನಡುವೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. 

ಈ ವಿಶೇಷ ಎಕ್ಸ್‌ಪ್ರೆಸ್‌(ರೈಲು ಸಂಖ್ಯೆ 06563) ರೈಲು ಡಿ.10 ರಿಂದ ಜನವರಿ 28ರವರೆಗೆ ಯಶವಂತಪುರ ನಿಲ್ದಾಣದಿಂದ ಪ್ರತಿ ಶನಿವಾರ ರಾತ್ರಿ 11.55ಕ್ಕೆ  ಹೊರಡಲಿದೆ. ಮರುದಿನ ಭಾನುವಾರ ಮಧ್ಯಾಹ್ನ 12.55ಕ್ಕೆ ಮುರುಡೇಶ್ವರ ನಿಲ್ದಾಣ ತಲುಪಲಿದೆ. ಈ ರೈಲಿಗೆ ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಇದೇ ಮಾರ್ಗದಲ್ಲಿ ಹಿಂದಿರುಗುವ ರೈಲು(06564) ಡಿ.11ರಿಂದ ಜನವರಿ 29ರವರೆಗೆ ಮುರುಡೇಶ್ವರ ನಿಲ್ದಾಣದಿಂದ ಪ್ರತಿ ಭಾನುವಾರ ಮಧ್ಯಾಹ್ನ 1.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದೆ. 2 ಟೈರ್‌ ಹವಾನಿಯಂತ್ರಿತ ದರ್ಜೆಯ ಒಂದು ಬೋಗಿ, 3 ಟೈರ್ ಹವಾನಿಯಂತ್ರಿತ ದರ್ಜೆಯ ಎರಡು ಬೋಗಿ, ಏಳು ಸ್ಲೀಪರ್ ಕ್ಲಾಸ್, ನಾಲ್ಕು ದ್ವಿತೀಯ ದರ್ಜೆ ಸಾಮಾನ್ಯ ಬೋಗಿ ಸೇರಿ 16 ಬೋಗಿಗಳು ಇರಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.