ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.8ಕ್ಕೆ ಮಹಿಳಾ ಉದ್ಯಮಿಗಳ ಸಮಾವೇಶ

Last Updated 6 ಮಾರ್ಚ್ 2021, 2:06 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸ್ವಉದ್ಯೋಗ ಮಾಡಿಕೊಂಡಿರುವ ಮಹಿಳಾ ಉದ್ಯಮಿಗಳ ಸಮಾವೇಶವನ್ನು ಗಾಂಧಿ ಬಜಾರ್‌ನಶ್ರೇಷ್ಠ ಉತ್ಪನ್ನ ಮಳಿಗೆಯಲ್ಲಿಇದೇ 8ರಂದು ಮಧ್ಯಾಹ್ನ3ರಿಂದ ಸಂಜೆ 7 ಗಂಟೆಯವರೆಗೆ ಆಯೋಜಿಸಲಾಗಿದೆ.

ಸಮಾವೇಶದ ಜೊತೆಗೆ ಗೃಹ ಉತ್ಪನ್ನ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವೂ ಇರಲಿದೆ.

‘ದಿನಬಳಕೆಯ ವಸ್ತುಗಳು, ಗೃಹಾಲಂಕಾರ ವಸ್ತುಗಳು, ರುಚಿಕರ ಉತ್ಪನ್ನಗಳು ಸೇರಿದಂತೆ ಗೃಹೋದ್ಯಮ ನಡೆಸುತ್ತಿರುವ ಮಹಿಳೆಯರಿಗೆ ಈ ಸಮಾವೇಶದ ಮೂಲಕ ವೇದಿಕೆ ಕಲ್ಪಿಸಲಾಗಿದೆ.ಮಾರಾಟದ ಜೊತೆ ಮಹಿಳೆಯರು ಸ್ವಉದ್ಯೋಗದ ಕುರಿತು ತಮ್ಮ ಅನುಭವಗಳು, ಸವಾಲುಗಳು, ಜಾಲತಾಣಗಳ ಮೂಲಕ ಉತ್ಪನ್ನಗಳ ಮಾರಾಟ, ಅಲ್ಲಿನ ಲಾಭ–ನಷ್ಟ, ಗ್ರಾಹಕಸ್ನೇಹಿ ಮಾರಾಟ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT