ಮಂಗಳವಾರ, ಮೇ 18, 2021
24 °C
ಹರಪನಹಳ್ಳಿಗೆ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಭೇಟಿ

ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಕಪಾಳಮೋಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಶನಿವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮ ವಿರುದ್ಧ ಕೆಲವರು ಧಿಕ್ಕಾರ ಕೂಗಿದ್ದರಿಂದ ಸಿಟ್ಟಿಗೆದ್ದು ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದರು.

ಅಧ್ಯಕ್ಷರ ಬರುವಿಕೆಗೆ ತಾಲ್ಲೂಕು ಪಂಚಾಯಿತಿ ಮುಂಭಾಗದ ರಸ್ತೆಯಲ್ಲಿ ತಾಲ್ಲೂಕು ಯುವ ಘಟಕದ ಪದಾಧಿಕಾರಿಗಳು ಕಾದು ನಿಂತಿದ್ದರು. ಯುವ ಘಟಕದ ಅಧ್ಯಕ್ಷ ಮತ್ತೂರು ಬಸವರಾಜ್ ಮತ್ತು ಚಿಗಟೇರಿ ಬ್ಲಾಕ್ ಯುವ ಘಟಕದ ಅಧ್ಯಕ್ಷ ಶಿವಕುಮಾರ್, ‘ಪ್ರವಾಸಿ ಮಂದಿರದಲ್ಲಿ ಸಭೆ ನಿಗದಿ ಪಡಿಸಲಾಗಿದೆ. ಅಲ್ಲಿಗೆ ಬನ್ನಿ’ ಎಂದು ರಕ್ಷಾ ರಾಮಪ್ಪ ಅವರನ್ನು ಆಹ್ವಾನಿಸಿದರು. ಆದರೆ, ರಕ್ಷಾ ರಾಮಯ್ಯ, ‘ಹೊಸಪೇಟೆ ಕಾರ್ಯಕ್ರಮಕ್ಕೆ ತೆರಳಲು ಈಗಾಗಲೇ ತಡವಾಗಿದೆ’ ಎಂದು ಹೇಳಿದರು. ಆಗ ಅವರ ವಿರುದ್ಧ ಕೆಲವರು ಧಿಕ್ಕಾರ ಕೂಗಿದರು. ತಕ್ಷಣವೇ ರಕ್ಷಾ ರಾಮಯ್ಯ ಅವರು ಧಿಕ್ಕಾರ ಕೂಗಿದವರ ಪೈಕಿ ಒಬ್ಬನ ಕೆನ್ನೆಗೆ ಏಟು ನೀಡಿ ಅಲ್ಲಿಂದ ತೆರಳಿದರು.

ಮತ್ತೂರು ಬಸವರಾಜ್, ‘ಧಿಕ್ಕಾರ ಕೂಗಿದವರು ಯಾರೆಂಬುದು ಗೊತ್ತಿಲ್ಲ. ಅವರು ಯುವ ಘಟಕದವರಲ್ಲ. ರಾಜ್ಯ ಘಟಕದ ಅಧ್ಯಕ್ಷರ ಭೇಟಿ ವೇಳೆ ನಡೆದ ಘಟನೆಯಿಂದ ಬೇಸರವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು