ಬುಧವಾರ, ಮೇ 25, 2022
26 °C

ಹೊಗೇನಕಲ್: ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇಶ್ಬರ ಬೆಟ್ಟ: ಪ್ರವಾಸಿ ತಾಣ ಹೊಗೇನಕಲ್ ಜಲಪಾತದ‌ ಬಳಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಉಮಾಶಂಕರ್ (19) ಮೃತಪಟ್ಟ ಯುವಕ. ಜಲಪಾತ ವೀಕ್ಷಣೆಗಾಗಿ ಉಮಾಶಂಕರ್ ಸ್ನೇಹಿತರೊಂದಿಗೆ ಬುಧವಾರ ಹೊಗೇನಕಲ್ ಗೆ ಬಂದಿದ್ದ. ನೀರು ಆಳಕ್ಕೆ ಧುಮುಕುವ ಸ್ಥಳಕ್ಕೆ ಆತ ತೆರಳಿದ್ದ ಎನ್ನಲಾಗಿದೆ. ಅಲ್ಲಿ ಸೆಲ್ಫಿ ತೆಗೆಯುವ ಯತ್ನದಲ್ಲಿ ಕಾಲು ಜಾರಿ 80 ಅಡಿಯಷ್ಟು ಆಳಕ್ಕೆ ಬಿದ್ದು ನಾಪತ್ತೆಯಾಗಿದ್ದ. 

ಗುರುವಾರ ರಾತ್ರಿಯವರೆಗೂ ಆತ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ 7.30ರ ಸುಮಾರಿಗೆ ಬಿದ್ದ ಸ್ಥಳದಿಂದ 50 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಮಹದೇಶ್ವರ ಬೆಟ್ಟದ ಪೊಲೀಸರು ತಿಳಿಸಿದ್ದಾರೆ.

ಮೃತ ಉಮಾಶಂಕರ್ ಕೊಳ್ಳೇಗಾಲದ ಜೆಎಸ್ ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು