ಗುರುವಾರ , ಮೇ 26, 2022
24 °C

ನಟ ಪುನೀತ್‌ ಸಮಾಧಿ ಸ್ಥಳಕ್ಕೆ ಬೈಸಿಕಲ್‌ನಲ್ಲಿ ತೆರಳಿದ ಯುವಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ತೆರಳಿ ದರ್ಶನ ಪಡೆಯಲು ನಗರದ 12 ಯುವಕರು ಸೋಮವಾರ ಬೈಸಿಕಲ್‌ನಲ್ಲಿ ಬೆಂಗಳೂರಿಗೆ ಪಯಣ ಬೆಳೆಸಿದರು.

ನಗರದ ತಹಶೀಲ್ದಾರ್ ಕಚೇರಿ ಬಳಿಯಿರುವ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವಿರುವ ನಾಮಫಲಕಕ್ಕೆ ಪೂಜೆ ನೆರವೇರಿಸಿದರು. ನಂತರ ವಾಲ್ಮೀಕಿ ವೃತ್ತ, ಗುಂಡಾ ಅರಣ್ಯ, ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ಬೆಂಗಳೂರಿನತ್ತ ಮುಖ ಮಾಡಿದರು.

ಈ ಯುವಕರು ಪ್ರತಿವರ್ಷ ಉತ್ತಮ ಮಳೆ, ಬೆಳೆಗಾಗಿ ಧರ್ಮಸ್ಥಳಕ್ಕೆ ಬೈಸಿಕಲ್‌ನಲ್ಲಿ ಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷ ಪುನೀತ್‌ ಸಮಾಧಿ ಸ್ಥಳಕ್ಕೆ ತೆರಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು