ಸೋಮವಾರ, ಜೂನ್ 14, 2021
28 °C

91 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಎಸ್‌ನ ಕಿರಿಯ ಮತ್ತು ಹಿರಿಯ ಶ್ರೇಣಿಯ 91 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇವರನ್ನು ವರ್ಗಾವಣೆ ಮಾಡಲಾಗಿತ್ತು. ಎಸ್‌.ಎನ್‌.ಬಾಲಚಂದ್ರ ಅವರನ್ನು ಕೆಪಿಟಿಸಿಎಲ್‌ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ನೇಮಕ ಮಾಡಲಾಗಿದೆ.

ವೆಂಕಟಾಚಲಪತಿ– ಬೆಂಗಳೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತ, ವೈ.ವಿ.ಶಾಂತರಾಜು– ಎಸ್ಟೇಟ್‌ ಅಧಿಕಾರಿ ಬಿಡಿಎ, ಎನ್‌.ಚಂದ್ರಶೇಖರ್‌– ಹೆಚ್ಚುವರಿ ನಿರ್ದೇಶಕ, ತೋಟಗಾರಿಕೆ, ಚಿದಾನಂದ ಸದಾಶಿವ– ಜಂಟಿ ನಿರ್ದೇಶಕ, ಪೌರಾಡಳಿತ ಇಲಾಖೆ, ವಿಜಯ ರವಿಕುಮಾರ್‌– ಉಪ ಆಯುಕ್ತ, ಬಿಎಂಆರ್‌ಡಿಎ, ಪಿ.ಶಿವರಾಜು– ಕಾರ್ಯದರ್ಶಿ, ಕೆಎಚ್‌ಬಿ, ಬಿ.ಸದಾಶಿವ ಪ್ರಭು– ಉಪಕಾರ್ಯದರ್ಶಿ, ಕಂದಾಯ ಇಲಾಖೆ, ಬಿ.ಶೋಭಾ– ಹೆಚ್ಚುವರಿ ಆಯುಕ್ತೆ, ಅಬಕಾರಿ ಇಲಾಖೆ, ಸೋಮಶೇಖರ– ಉಪಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಎಸ್‌.ಸಿ.ಜಗದೀಶ್‌– ಜಂಟಿ ಆಯುಕ್ತ, ಬಿಬಿಎಂಪಿ (ಮಹಾದೇವಪುರ ವಲಯ), ಸಿ.ಎನ್‌.ಮಂಜುನಾಥ– ಅಧೀನ ಕಾರ್ಯದರ್ಶಿ, ವಸತಿ ಇಲಾಖೆ, ಕೆ.ಟಿ.ಶಾಂತಲಾ– ಜಂಟಿ ನಿರ್ದೇಶಕಿ, ರೇಷ್ಮೆ ಇಲಾಖೆ– ಸೇರಿ ಒಟ್ಟು 91 ಅಧಿಕಾರಿಗಳ ವರ್ಗ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು