ತವರಿನ ಭಾವ ತಳೆದ ಗೊರುಚ

7
ಕಸಾಪ ಶತಮಾನೋತ್ಸವ ದತ್ತಿ ಪ್ರಶಸ್ತಿ ಪ್ರದಾನ

ತವರಿನ ಭಾವ ತಳೆದ ಗೊರುಚ

Published:
Updated:
Deccan Herald

ಬೆಂಗಳೂರು: ‘ಕಣ್ಣಿರುವ ತನಕ ಸಾಹಿತ್ಯ ಪರಿಷತ್‌ ಕಡೆಗೆ ತಿರುಗಿ ನೋಡುತ್ತೇನೆ.’ – ಇದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಭಾವುಕ ನುಡಿಗಳು. 

ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ‌ದ ಅಂಗವಾಗಿ ನೀಡಲಾದ ದತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. 

‘ತವರಿನಿಂದ ಬಾಗಿನ ಪಡೆದು ಹೊರಟ ಹೆಣ್ಣುಮಗಳು ತಿಟ್ಟುಹತ್ತಿ ತವರ ಕಡೆಗೆ ತಿರುಗಿ ನೋಡಿದ ಹಾಗೆ ನಾನು ಕೆಲಸ ಮಾಡಿದ ಸಾಹಿತ್ಯ ಪರಿಷತ್ತನ್ನು ನೋಡುತ್ತಲೇ ಇರುತ್ತೇನೆ’ ಎಂದರು. 

ಪರಿಷತ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ದಿನಗಳನ್ನು ಮೆಲುಕು ಹಾಕಿದ ಗೊ.ರು.ಚ, ‘ನನ್ನ ಅವಧಿಯಲ್ಲಿ ಪರಿಷತ್‌ನಲ್ಲಿ ತೀವ್ರ ಬಡತನವಿತ್ತು. ನಾನು ಅಧ್ಯಕ್ಷನಾಗಿದ್ದ ಎಲ್ಲ ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಇಂದು ಆ ಎಲ್ಲ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿವೆ’ ಎಂದರು. 

‘ಸಾಂಸ್ಕೃತಿಕ ಸಂಪತ್ತಿನ ರಕ್ಷಣೆ ಮಾಡುವುದು ಕನ್ನಡ ಸಾಹಿತ್ಯ ಪರಿಷತ್‌. ಆದ್ದರಿಂದ ಪರಿಷತ್‌ನ ಪ್ರಕಟಣೆಗಳು ಪರಿಪೂರ್ಣವಾಗಿರಬೇಕು’ ಎಂದು ಆಶಿಸಿದರು. 

ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಮಾತನಾಡಿ, ‘ಗೊ.ರು.ಚ. ಅವರಿಗೆ ಸನ್ಮಾನ ಮಾಡಿ ಪರಿಷತ್‌ ಸಮಾಜದ ಋಣ ತೀರಿಸಿದೆ. ಅವರು ಸಂಪಾದಿಸಿದ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥ ಮರು ಮುದ್ರಣವಾಗಬೇಕು. ಅವರು ಜನಪದ ಲೋಕದ ವಿಶ್ವಕೋಶ. ಬಸವ, ಗಾಂಧಿ ತತ್ವ ಅಳವಡಿಸಿಕೊಂಡು ಮಾದರಿ ಆಗಿದ್ದಾರೆ. ಅವರು ಈ ನಾಡಿನ ಆಸ್ತಿ ಎಂದು ಬಣ್ಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !