ಹೊಸತನದಲ್ಲಿ ಕೇರಳ ಪ್ರವಾಸೋದ್ಯಮ

ಶನಿವಾರ, ಮೇ 25, 2019
32 °C

ಹೊಸತನದಲ್ಲಿ ಕೇರಳ ಪ್ರವಾಸೋದ್ಯಮ

Published:
Updated:
Prajavani

ಕೇರಳದ ಕಣ್ಣೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಯಿತು. ಇದು ಅಲ್ಲಿನ ಪ್ರವಾಸೋದ್ಯಮ ಚಿಗುರೊಡೆಯಲು ಸಹಕಾರಿಯಾಯಿತು. ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯ ಹೆಮ್ಮ ಎಂಬ ಗರಿಯೂ ಪ್ರವಾಸೋದ್ಯಮಕ್ಕೆ ಸೇರಿಕೊಂಡಿದೆ.

ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವಿರುವ ಕಣ್ಣೂರು ಪ್ರವಾಸಿಗಳ ಅಚ್ಚುಮೆಚ್ಚಿನ ತಾಣವಾಗುತ್ತಿದೆ. ಇಲ್ಲಿನ ಹೊಸ ವಿಮಾನ ನಿಲ್ದಾಣ ಕರ್ನಾಟಕದ ಕೊಡಗು, ಮೈಸೂರು ಮತ್ತು ಕೊಯಮತ್ತೂರು ಗಡಿಗಳನ್ನು ಹೊಂದಿರುವ ಮಲಬಾರ್, ದಕ್ಷಿಣ ಭಾರತದ ಹೊಸ ಪ್ರವಾಸೋದ್ಯಮ ಹೆದ್ದಾರಿಯಾಗುವ ಭರವಸೆ ಹೊಂದಿದೆ.

‘ನಮ್ಮ ಸರ್ಕಾರ ಕಣ್ಣೂರು–ಕಾಸರಗೋಡು ಜಿಲ್ಲೆಗಳ ವಳಿಯಪರಂಬಾ ಹಿನ್ನೀರು, ಕುಪ್ಪಂ ಮತ್ತು ರಾಣಿಪುರಂ'ನಂತಹ ಸಣ್ಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೊಸ ವರ್ಷದ ಪ್ರವಾಸೋದ್ಯಮ ಟ್ರೆಂಡ್ ಸೆಟ್ಟರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇರಳ ಸಾಂಸ್ಕೃತಿಕ ಉತ್ಸವಗಳ ಮೂಲಕ ಕಲಾಸಕ್ತರನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ. ನಿಶಾಗಂಧಿ ನೃತ್ಯೋತ್ಸವ, ಜನಪ್ರಿಯ ಕೊಚ್ಚಿ ಮುಜಿಂರಿಸ್ ಬೈಯೆನ್ನೇಲ್‍ನಂತಹ ಸಾಂಸ್ಕೃತಿಕ ಉತ್ಸವಗಳಿಗೆ ಸಿದ್ಧತೆ ನಡೆದಿದೆ. ಕೊಚ್ಚಿಯ ಮಜಿಂರೀಸ್‌ ಬೈಯೆನ್ನೇಲ್‍ನ ಈ 5ನೇ ಆವೃತ್ತಿ ಕೊಚ್ಚಿಯಲ್ಲಿ ಮಾರ್ಚ್ 29, 2019ರವರೆಗೆ ನಡೆಯಲಿದೆ. ‘ನಿಶಾಗಂಧಿ ಮಾನ್ಸೂನ್ ಫೆಸ್ಟಿವಲ್ ಸೇರಿದಂತೆ ಹಲವು ನೃತ್ಯೋತ್ಸವಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಾಣಿ ಜಾರ್ಜ್ ತಿಳಿಸಿದರು.

ವಿಶ್ವದ ಅತ್ಯಂತ ದೊಡ್ಡ ಪಕ್ಷಿ ಶಿಲ್ಪ : ಸುಸ್ಥಿರ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಮತ್ತೊಂದು ಉದಾಹರಣೆ ಜಟಾಯು ಅರ್ಥ್ ಸೆಂಟರ್. 65 ಎಕರೆಯಲ್ಲಿರುವ ಈ ಕೇಂದ್ರ ಕಳೆದ ವರ್ಷ ಆಗಸ್ಟ್ ನಲ್ಲಿ ಉದ್ಘಾಟನೆಯಾಯಿತು. ಜಟಾಯುವಿನ ಬೃಹತ್ ವಿಗ್ರಹ 200 ಅಡಿ ಉದ್ದ, 150 ಅಡಿ ಅಗಲ ಮತ್ತು 70ಅಡಿ ಎತ್ತರವಿದ್ದು ವಿಶ್ವದ ಅತ್ಯಂತ ದೊಡ್ಡ ಪಕ್ಷಿ ಶಿಲ್ಪವೆನಿಸಿದೆ. ಈ ತಾಣ ದಕ್ಷಿಣ ಕೇರಳದ ಪ್ರವಾಸೋದ್ಯಮ ತಾಣಗಳ ಕೇಂದ್ರದಲ್ಲಿದ್ದು ಸುಲಭವಾಗಿ ತಲುಪಬಹುದು.

ಜೀವವೈವಿಧ್ಯ ವಸ್ತು ಸಂಗ್ರಹಾಲಯ:‌ ಕೇರಳದಲ್ಲಿ ಪರಿಸರ ಹಾಗೂ ಪರಿಸರ ಸ್ನೇಹಿ ಉಪಕ್ರಮಗಳದ ಜತೆಗೆ, ಪ್ರಥಮ ಜೀವವೈವಿಧ್ಯದ ವಸ್ತು ಸಂಗ್ರಹಾಲಯವನ್ನು ತಿರುವನಂತಪುರದ ಹೊರವಲಯದಲ್ಲಿ ಆರಂಭಿಸಲಾಗಿದೆ. ಈ ಮ್ಯೂಸಿಯಂ ಒಮ್ಮೆ ಬೋಟ್‍ಹೌಸ್ ಆಗಿತ್ತು, ಈಗ ರಾಜ್ಯದ ಪ್ರಥಮ ಸೈನ್ಸ್ ಆನ್ ಸ್ಫಿಯರ್(ಎಸ್‍ಒಎಸ್) ಸಿಸ್ಟಂ ಆಗಿದೆ.

ಕೇರಳ ಪ್ರವಾಸೋದ್ಯಮ ಕುರಿತ ಹೆಚ್ಚಿನ ಮಾಹಿತಿಗಾಗಿ www.keralatourism.org ಜಾಲತಾಣ ಸಂಪರ್ಕಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !