ಇಮ್ರಾನ್‌ ಪ್ರಮಾಣವಚನಕ್ಕೆ ಅಮೀರ್‌ಖಾನ್‌, ಗವಾಸ್ಕರ್, ಕಪಿಲ್‌ದೇವ್‌ಗೆ ಆಹ್ವಾನ

7

ಇಮ್ರಾನ್‌ ಪ್ರಮಾಣವಚನಕ್ಕೆ ಅಮೀರ್‌ಖಾನ್‌, ಗವಾಸ್ಕರ್, ಕಪಿಲ್‌ದೇವ್‌ಗೆ ಆಹ್ವಾನ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್‌ಖಾನ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಬಾಲಿವುಡ್‌ ನಟ ಅಮೀರ್‌ಖಾನ್‌, ಮಾಜಿ ಕ್ರಿಕೆಟಿಗರಾದ ಸುನೀಲ್‌ ಗವಾಸ್ಕರ್‌ ಹಾಗೂ ಕಪಿಲ್‌ದೇವ್‌ ಅವರನ್ನು ಆಹ್ವಾನಿಸಲಾಗಿದೆ.

‘ಸಮಯದ ಅಭಾವ ಇದೆ. ಹೀಗಾಗಿ ಈ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸುವಂತೆ ವಿದೇಶಾಂಗ ವ್ಯವಹಾರಗಳ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ)ನ ವಕ್ತಾರ ಫವಾದ್‌ ಚೌಧರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !