‘ಸಾಂದರ್ಭಿಕ ಶಿಶುವೀಗ ಒದೆಯುತ್ತಿದೆ..!’

7
ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ವ್ಯಂಗ್ಯ

‘ಸಾಂದರ್ಭಿಕ ಶಿಶುವೀಗ ಒದೆಯುತ್ತಿದೆ..!’

Published:
Updated:

ವಿಜಯಪುರ: ‘ಏಳು ತಿಂಗಳ ಹಿಂದೆ ಜನಿಸಿದ ಸಾಂದರ್ಭಿಕ ಶಿಶು ಅಂಬೆಗಾಲಿಡಲು ಆರಂಭಿಸುತ್ತಿದ್ದಂತೆ ತನ್ನ ಜನನಕ್ಕೆ ಕಾರಣವಾದ ಕಾಂಗ್ರೆಸ್‌ನವರನ್ನೇ ಒದೆಯಲಾರಂಭಿಸಿದೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.

‘ಕಾಂಗ್ರೆಸ್‌ ಹೈಕಮಾಂಡ್‌ ನೀಡಿದ ನಿಗಮ–ಮಂಡಳಿ ಅಧ್ಯಕ್ಷರ ಪಟ್ಟಿಗೆ ಸಾಂದರ್ಭಿಕ ಶಿಶು ಎಂದೇ ಸಂಬೋಧಿಸಿಕೊಂಡಿದ್ದ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೂವರೆಗೂ ಹಸಿರು ನಿಶಾನೆ ನೀಡಿಲ್ಲ. ಇದು ಕಾಂಗ್ರೆಸ್‌ನೊಳಗೆ ತೀವ್ರ ಅಸಮಾಧಾನ ಸೃಷ್ಟಿಸಿದೆ’ ಎಂದು ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಾಂದರ್ಭಿಕ ಶಿಶು ಅಧಿಕಾರ ನಡೆಸಲಾಗದೆ ತೊಳಲಾಡುತ್ತಿದ್ದರೆ; ಇದೇ ಕುಟುಂಬದ ಇನ್ನೊಂದು ದಷ್ಟಪುಷ್ಟ ಶಿಶು, ಹೆಚ್ಚಿನ ಅನುದಾನವನ್ನು ಹಾಸನ ಜಿಲ್ಲೆಗೆ ಕೊಂಡೊಯ್ಯೊತ್ತಿದೆ. ಅದಕ್ಕೆ ಲಗಾಮು ಹಾಕುವವರೇ ಇಲ್ಲವಾಗಿದ್ದಾರೆ. ಪ್ರತಿ ಕ್ಯಾಬಿನೆಟ್‌ ಸಭೆಯಲ್ಲೂ ತನ್ನ ತವರು ಜಿಲ್ಲೆಗೆ ವಿಶೇಷ ಕೊಡುಗೆ ಪಡೆಯುವುದನ್ನು ಈ ಶಿಶು ತಪ್ಪಿಸುವುದಿಲ್ಲ’ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

‘ಅಲ್ಪಾವಧಿಯ ಟೆಂಡರ್‌ಗೆ ಅವಕಾಶವಿರುವುದು ತುರ್ತು ಸಂದರ್ಭದಲ್ಲಿ ಮಾತ್ರ. ಆದರೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಎಲ್ಲ ಕಾನೂನು ಗಾಳಿಗೆ ತೂರಿ, ಹಾಸನ ಜಿಲ್ಲೆಗೆ ಅಭಿವೃದ್ಧಿ ಹೆಸರಿನಲ್ಲಿ ಅನುದಾನ ಮಂಜೂರು ಮಾಡಿಸುತ್ತಿದ್ದಾರೆ’ ಎಂದು ವಿಜಯೇಂದ್ರ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !