ಐಎಎಸ್‌ ಅಧಿಕಾರಿಗಳಿಗೆ ಕನ್ನಡ ಬಾರದು: ಶಾಸಕ ಆರ್.ನರೇಂದ್ರ ಬೇಸರ

7

ಐಎಎಸ್‌ ಅಧಿಕಾರಿಗಳಿಗೆ ಕನ್ನಡ ಬಾರದು: ಶಾಸಕ ಆರ್.ನರೇಂದ್ರ ಬೇಸರ

Published:
Updated:
Deccan Herald

ಕೊಳ್ಳೇಗಾಲ: ರಾಜ್ಯದ ಆಡಳಿತ ಭಾಷೆ ಸಂಪೂರ್ಣವಾಗಿ ಕನ್ನಡಮಯಗೊಂಡಿಲ್ಲ. ಅನೇಕ ಐಎಎಸ್‌ ಅಧಿಕಾರಿಗಳಿಗೆ ಸರಿಯಾಗಿ ಕನ್ನಡ ಬರುವುದಿಲ್ಲ ಎಂದು ಶಾಸಕ ಆರ್.ನರೇಂದ್ರ ದೂರಿದರು.

ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಡಳಿತ ನಡೆಸುವ ಐಎಎಸ್‌ ಅಧಿಕಾರಿಗಳು ಮೊದಲು ಕನ್ನಡವನ್ನು ಸ್ಪಷ್ಟವಾಗಿ ಕಲಿಯಬೇಕು. ಕನ್ನಡ ಕಲಿಯದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಬಳಕೆ ಮಾಡಿದಕ್ಕೆ ದಂಡ ವಿಧಿಸುವಂತಹ ಪರಿಸ್ಥಿತಿ ಇದು. ಇದು ಬೇಸರದ ಸಂಗತಿ. ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿದೆ ಎಂದರು.

ಶಾಸಕ ಎನ್.ಮಹೇಶ್‌ ಮಾತನಾಡಿ, ‘ರಾಜ್ಯಕ್ಕೆ ಅನ್ಯಭಾಷೆಯವರು ಬಂದರೆ ಅವರ ಭಾಷೆಯಲ್ಲಿ ಮಾತನಾಡುವ ಗುಣ ಕನ್ನಡಿಗರಲ್ಲಿ ಬಂದುಬಿಟ್ಟಿದೆ. ಇದನ್ನೇ ಕೆಲವರು ದುರಪಯೋಗ ಪಡಿಸಿಕೊಳ್ಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸಕ ಎಸ್.ಮಹದೇವಪ್ರಭು ಮುಖ್ಯ ಭಾಷಣ ಮಾಡಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್ ಧ್ವಜಾರೋಹಣ ಮಾಡಿದರು. ನಾಡಧ್ವಜವನ್ನು ತಹಶೀಲ್ದಾರ್ ರಾಯಪ್ಪ ಹುಣಸಗೆ ಹಾರಿಸಿದರು.

ಪಿಎಸ್‍ಐ ವೀಣಾ ನಾಯಕ್‌ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ನಂಜುಂಡಸ್ವಾಮಿ, ಡಿವೈಎಸ್‍ಪಿ ಪುಟ್ಟಮಾದಯ್ಯ, ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಜಣ್ಣ, ನಗರಸಭೆ ಪೌರಾಯುಕ್ತ ನಾಗಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಬಿಇಒ ಚಂದ್ರಪಾಟೀಲ, ಲೋಕೋಪಯೋಗಿ ಇಲಾಖೆಯ ಮಹದೇವಸ್ವಾಮಿ ಇದ್ದರು.‌

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !