ಕೇಂದ್ರ ಸರ್ಕಾರದ‌ ವಿರುದ್ಧ ‌ಮಾತನಾಡಿದರೆ ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ

ಶನಿವಾರ, ಮಾರ್ಚ್ 23, 2019
24 °C

ಕೇಂದ್ರ ಸರ್ಕಾರದ‌ ವಿರುದ್ಧ ‌ಮಾತನಾಡಿದರೆ ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ

Published:
Updated:

ಬೆಂಗಳೂರು: ‘ಕೇಂದ್ರ ಸರ್ಕಾರದ‌ ವಿರುದ್ಧ ‌ಮಾತನಾಡುವವರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದಿಂದ ಬುಧವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೋದಿಗೆ ಜೈ ಜೈ ಹೇಳಿದರೆ ಮಾತ್ರ ದೇಶಪ್ರೇಮಿಗಳು. ಹೀಗಾಗಿ, ನಾವೆಲ್ಲರೂ ಒಟ್ಟಾಗಬೇಕಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ’ ಎಂದರು.

‘ಅನಂತಕುಮಾರ ಹೆಗಡೆಯಂಥವರನ್ನೂ ಸೋಲಿಸಬೇಕು. ಇಂಥವರು ಧರ್ಮ, ರಾಜಕೀಯ, ಭಾಷೆಯನ್ನು ಕೆಡಿಸುತ್ತಿದ್ದಾರೆ.‌ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಹಾಳು ಮಾಡುತ್ತಾರೆ’ ಎಂದರು.

‘ಬಿಜೆಪಿಯವರು ಐದು ವರ್ಷ ಆಡಳಿತ ನಡೆಸಿದ್ದಾರಲ್ಲ. ಯಾಕೆ ಅವರು ರಾಮಮಂದಿರ ಕಟ್ಟಲಿಲ್ಲ.‌ ಆಗ ಅವರಿಗೆ ಯಾಕೆ ರಾಮ ನೆನಪಿಗೆ ಬರಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ನೆನಪಿಗೆ ಬಂದನೇ’ ಎಂದು ಬಿಜೆಪಿ ನಾಯಕರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವೆ ಜಯಮಾಲಾ, ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ರಾಣಿ ಸತೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !