ರಾಘಣ್ಣ ಅಪರೂಪದ ಗಾಯಕ

ಶುಕ್ರವಾರ, ಏಪ್ರಿಲ್ 26, 2019
24 °C

ರಾಘಣ್ಣ ಅಪರೂಪದ ಗಾಯಕ

Published:
Updated:
Prajavani

‘ಗ್ರಾಮೀಣ ಬದುಕಿನ ಚಿತ್ರಣ ನೀಡುತ್ತ, ಅನೇಕ ಖ್ಯಾತ ಸಂಗೀತಗಾರರಿಗೆ ಗುರುಸ್ವರೂಪರಾಗಿರುವ ಗರ್ತಿಕೆರೆ ರಾಘಣ್ಣನವರು ಸಂಗೀತಕ್ಕೆ ಹೊಸ ಶೈಲಿಯನ್ನೇ ನೀಡಿದ್ದಾರೆ. ಅವರೊಬ್ಬ ಅಪರೂಪದ ಗಾಯಕ’ ಎಂದು ಸಾಹಿತಿ ಗಜಾನನ ಶರ್ಮಾ ಹೇಳಿದರು. 

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಈಚೆಗೆ ನಡೆದ ಸಾಹಿತ್ಯ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಾಗರ್ ಆಸ್ಪತ್ರೆಯ ಡಾ.ಕಲ್ಯಾಣಿ ಕರ್ಕರೆ ಅಪಸ್ಮಾರದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ನಂತರ ಗರ್ತಿಕೆರೆ ರಾಘಣ್ಣ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಶಂಕರ ಕುಲಕರ್ಣಿ, ಹಾರ್ಮೋನಿಯಂನಲ್ಲಿ ವಸುಧೇಂದ್ರ ವೈದ್ಯ ಸಹಕರಿಸಿದರು. 

ಪತ್ರಕರ್ತ ಟಿ.ಎ.ಪಿ.ಶೆಣೈ, ಅನುವಾದಕಿ ಪೂರ್ಣಿಮಾ ಗೋಪಾಲ, ಕಾರ್ಯಕ್ರಮದ
ಸಂಘಟಕ ವಾಸುದೇವ ಕಾರಂತ, ಸಂಘದ ಮಾಜಿ ಅಧ್ಯಕ್ಷ ವಿ.ಜಿ.ಪಂಡಿತ್, ಕವಯತ್ರಿ ಕೊಪ್ಪರಂ ಅನ್ನಪೂರ್ಣ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !