ಚೇತನ್‌ಗೆ ಡಿಸ್ಕಸ್‌ ಎಸೆತದ ತಾರೆಯಾಗುವ ಕನಸು

ಮಂಗಳವಾರ, ಜೂನ್ 25, 2019
22 °C

ಚೇತನ್‌ಗೆ ಡಿಸ್ಕಸ್‌ ಎಸೆತದ ತಾರೆಯಾಗುವ ಕನಸು

Published:
Updated:
Prajavani

ಚಾಮರಾಜನಗರ: ‘ದೈಹಿಕವಾಗಿ ಸದೃಢರಾದವರು ಆರೋಗ್ಯವಾಗಿರುತ್ತಾರೆ. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎನ್ನುವಂತೆ ಯಾವುದಾದರೊಂದು ಆಟದಲ್ಲಿ ತೊಡಗಿಸಿಕೊಂಡರೆ ಆ ಆಟವೇ ನಮ್ಮ ಬದುಕು ರೂಪಿಸುತ್ತದೆ’ ಎನ್ನುತ್ತಾರೆ ತಾಲ್ಲೂಕಿನ ಅಮಚವಾಡಿ ಗ್ರಾಮದ ಎಸ್. ಚೇತನ್‌.

ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಇವರು ಪಿಯುಸಿ ಮುಗಿಸಿ ಪದವಿ ಶಿಕ್ಷಣ ಮುಂದುವರಿಸುವ ಜೊತೆಗೆ ಕ್ರೀಡೆಯಲ್ಲಿ ಮುಂದುವರಿಯಲು ಚಾಮರಾಜನಗರದಲ್ಲಿ ಸ್ಪೋರ್ಟ್ಸ್ ಕ್ಲಬ್‌ ಸೇರುವ ಹಂಬಲ ಹೊಂದಿದ್ದಾರೆ. ಓದಿನೊಂದಿಗೆ ಕ್ರೀಡೆಯನ್ನು ನೆಚ್ಚಿನ ಹವ್ಯಾಸವಾಗಿಸಿಕೊಂಡಿದ್ದಾರೆ. ಶಾಲಾ ಹಂತದಲ್ಲಿ ಕಬಡ್ಡಿ ತುಂಬಾ ಇಷ್ಟಪಡುತ್ತಿದ್ದರು. ಡಿಸ್ಕಸ್‌ ಎಸೆತ, ಜಾವಲಿನ್‌, ಕಬಡ್ಡಿ ಹಾಗೂ ಗುಂಡೆಸೆತ ಕ್ರೀಡೆಗಳಲ್ಲಿ ಪಳಗಿದ್ದಾರೆ. ಸ್ನೇಹಿತರೊಡನೆ ಇತರೇ ಆಟದಲ್ಲೂ ಮುಂದಿದ್ದಾರೆ. ಶಿಕ್ಷಕರೊಬ್ಬರ ಸಲಹೆ ಮೆರೆಗೆ ಡಿಸ್ಕಸ್‌ ಎಸೆತದಲ್ಲಿ ಪರಿಣತಿ ಹೊಂದಲು ಆರಂಭಿಸಿದರು.

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಹಂತದವರೆಗೂ ಕಬಡ್ಡಿಯಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಇವರು ಬಳಿಕ ಡಿಸ್ಕಸ್‌ ಎಸೆತದ ಕಡೆ ಒಲವು ತೋರಿದರು.

ಡಿಸ್ಕಸ್‌ ಎಸೆತ ಇವರನ್ನು ರಾಜ್ಯಮಟ್ಟದ ವರೆಗೆ ತಂದು ನಿಲ್ಲಿಸಿತು. 2017–18ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಬಳಿಕ ಅದೇ ವರ್ಷ (2017–18)ನಗರದ ಸರ್ಕಾರಿ ಬಾಲಕರ ಜೂನಿಯರ್‌ ಕಾಲೇಜು ವತಿಯಿಂದ ಉಡುಪಿಗೆ ತೆರಳಿದ್ದರು. ಅಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ತಮ್ಮದಾಸಗಿಸಿಕೊಂಡಿದ್ದಾರೆ.

‘ರಾಜ್ಯ ಮಟ್ಟದಲ್ಲಿ ಡಿಸ್ಕಸ್ ಎಸೆತವನ್ನು 60 ಮೀಟರ್ ಎಸೆದರೆ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಬಹುದು. ಇಲ್ಲಿ ಸುಮಾರು 70 ಮೀಟರ್‌ ಎಸೆಯಬೇಕು. ನಾನು ರಾಜ್ಯಮಟ್ಟದಲ್ಲಿ ಭಾಗವಹಿಸಿದಾಗ 56 ಮೀಟರ್‌ ಎಸೆದು ದ್ವಿತೀಯ ಸ್ಥಾನ ಪಡೆದೆ. ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎಂದು ಅಗತ್ಯ ತಯಾರಿ ನಡೆಸುತ್ತಿದ್ದೇನೆ’ ಎಂದು ಚೇತನ್‌ ಹೇಳಿದರು.

ಚಿನ್ನಕ್ಕೆ ಗುರಿ: ‘ಡಿಸ್ಕಸ್‌ ಎಸೆತದಲ್ಲಿ ಅಥ್ಲೆಟಿಕ್‌ ನಲ್ಲಿ ಭಾಗವಹಿಸಿ ಚಿನ್ನ ಗೆಲ್ಲಬೇಕು ಎಂಬ ಗುರಿ ಇದೆ. ಆದರೆ, ಅದಕ್ಕೆಲ್ಲ ಹೆಚ್ಚಿನ ಮಟ್ಟದ ತಯಾರಿಯೂ ಬೇಕು. ಸದ್ಯ ರಾಜ್ಯ ಮಟ್ಟದಿಂದ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಯನ್ನು ಪ್ರತಿನಿಧಿಸಬೇಕು ಎನ್ನುವ ಗುರಿ ಹೊಂದಿದ್ದೇನೆ’ ಎಂಬ ಅವರ ಮನದಾಸೆಯನ್ನು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಬೇಕು

‘ಸರ್ಕಾರ ಮಟ್ಟದ ಕ್ರೀಡಾ ಇಲಾಖೆಗಳು ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು. ಹಳ್ಳಿಯಲ್ಲಿರುವ ಆಟಗಾರರಿಗೆ ಅನೇಕ ಮಾಹಿತಿಗಳು ತಿಳಿದಿರುವುದಿಲ್ಲ. ಆದ್ದರಿಂದ, ಕಾಲೇಜುಗಳಲ್ಲಿ ಹಾಗೂ ಕ್ರೀಡಾ ಇಲಾಖೆಗಳು ಎಲ್ಲರಿಗೂ ಮಾಹಿತಿ ತಿಳಿಸುವ ವ್ಯವಸ್ಥೆ ಮಾಡಬೇಕು’ ಎಂದು ಚೇತನ್ ಹೇಳುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !