ಗುರುವಾರ , ನವೆಂಬರ್ 14, 2019
22 °C

‘ಬಸ್‌ಗಳ ಮಾಹಿತಿ ಬೇಕೇ– ವಾಣಿಗೆ ಕೇಳಿ’

Published:
Updated:

ಬೆಂಗಳೂರು: ಬಸ್‌ಗಳ ಬಗ್ಗೆ ತ್ವರಿತ ಮಾಹಿತಿ ಪಡೆಯಲು ಮತ್ತು ಟಿಕೆಟ್ ಬುಕಿಂಗ್‌ಗೆ ಸಹಾಯ ಬೇಕೆ? ಹಾಗಿದ್ದರೆ, ವಾಣಿಯನ್ನು ಕೇಳಿ.

ಪ್ರಯಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ವೆಬ್‌ಸೈಟ್ ಮೂಲಕ ಉತ್ತರಿಸಲು ಕೆಎಸ್ಆರ್‌ಟಿಸಿ ‘ಚಾಟ್ಬೊಟ್‌ ಸಹಾಯವಾಣಿ’ ಆರಂಭಿಸಿದೆ.

www.ksrtc.in ವೆಬ್‌ಸೈಟ್ ಪುಟ ತೆರೆದ ಕೂಡಲೇ ಬಲಭಾಗದಲ್ಲಿ ‘ಸಹಾಯ ಬೇಕೇ? ವಾಣಿಗೆ ಕೇಳಿ’ ಎಂಬ ಟೂಲ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ಬೊಟ್ ತೆರೆದುಕೊಳ್ಳುತ್ತದೆ. ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಕೇಳಿದರೂ ಕ್ಷಣಾರ್ಧದಲ್ಲೇ ಮಾಹಿತಿ ನೀಡುತ್ತದೆ.

‘ಚಾಟ್ಬೊಟ್ ಸಹಾಯವಾಣಿ ದಿನದ 24 ಗಂಟೆಯೂ ಗ್ರಾಹಕರಿಗೆ ಸೇವೆ ಒದಗಿಸುತ್ತದೆ. ಕಡಿಮೆ ಸಮಯದಲ್ಲಿ ಉತ್ತರ ನೀಡಲಿದೆ’ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)