ಒತ್ತಡ ನಿಗ್ರಹಕ್ಕೆ ಕ್ರೀಡೆ ಸಹಕಾರಿ:ಅಶೋಕ್‌ಕುಮಾರ್‌

7
ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ಕ್ರೀಡಾಕೂಟಕ್ಕೆ ಚಾಲನೆ

ಒತ್ತಡ ನಿಗ್ರಹಕ್ಕೆ ಕ್ರೀಡೆ ಸಹಕಾರಿ:ಅಶೋಕ್‌ಕುಮಾರ್‌

Published:
Updated:
Deccan Herald

ಚಾಮರಾಜನಗರ: ‘ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ ಮತ್ತು ಕ್ರೀಡೆಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್‌ಕುಮಾರ್ ಶುಕ್ರವಾರ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಿಗಮದ ಚಾಮರಾಜನಗರ ವಿಭಾಗ ಆಯೋಜಿಸಿದ್ದ ನಡೆದ ವಾರ್ಷಿಕ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಮನುಷ್ಯ ಒತ್ತಡದ ನಡುವೆ ವೃತ್ತಿ ನಿರ್ವಹಿಸುತ್ತಿದ್ದಾನೆ. ನಮಗೆ ಸಂತೋಷವಾದಾಗ ಮನಸ್ಸಿನ ನೆಮ್ಮದಿ ದೂರವಾಗುತ್ತದೆ. ಕ್ರೀಡೆಯಂತಹ ಮನರಂಜನೆಯಲ್ಲಿ ಇಂತಹ ಸಂತಸ ಸಿಗುತ್ತದೆ’ ಎಂದು ಅವರು ಹೇಳಿದರು.

‘ನಿಗಮವು ಪ್ರತಿ ವರ್ಷ ಸಂಸ್ಥೆಯ ಸಿಬ್ಬಂದಿಗಾಗಿ ಕ್ರೀಡಾಕೂಟ ಆಯೋಜಿಸುತ್ತದೆ. ಕ್ರೀಡೆಯೊಂದಿಗೆ ಸಾಂಸ್ಕೃತಿಕ ಸರ್ಧೆಗಳೂ  ನಡೆಯಲಿವೆ. ಸ್ವಾತಂತ್ರ್ಯೋತ್ಸವದ ದಿನ ಬಹುಮಾನ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

ಕೆಎಸ್‌ಆರ್‌ಟಿಸಿಯ ಡಿಎಂಇ ಮಲ್ಲೇಶ್, ಉಗ್ರಾಣಾಧಿಕಾರಿ ಚಂದ್ರಮೌಳಿ, ಲೆಕ್ಕಾಧಿಕಾರಿ ಅರ್.ಬಿ. ರುದ್ರಮುನಿ, ನಂಜನಗೂಡು ವಿಭಾಗದ ವ್ಯವಸ್ಥಾಪಕ ಮಹದೇವಸ್ವಾಮಿ, ಕಾರ್ಮಿಕ ಕಲ್ಯಾಣಾಧಿಕಾರಿ ಎಂ.ರಶ್ಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !