ಕುವೆಂಪು ಸಾಹಿತ್ಯದಲ್ಲಿ ವಿಜ್ಞಾನ; ಪ್ರೊ.ಕೆ.ಚಿದಾನಂದಗೌಡ

ಸೋಮವಾರ, ಮಾರ್ಚ್ 25, 2019
28 °C
‘ಕುವೆಂಪು ಕೃತಿಗಳಲ್ಲಿ ಬಹುತ್ವದ ನೆಲೆಗಳು’ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭ

ಕುವೆಂಪು ಸಾಹಿತ್ಯದಲ್ಲಿ ವಿಜ್ಞಾನ; ಪ್ರೊ.ಕೆ.ಚಿದಾನಂದಗೌಡ

Published:
Updated:
Prajavani

ವಿಜಯಪುರ: ‘ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಎಷ್ಟೋ ವಿಜ್ಞಾನಿಗಳು ಕಾಣದಿರುವ ವೈಜ್ಞಾನಿಕತೆ ಕುವೆಂಪು ಅವರಲ್ಲಿರುವ ಕವಿಗೆ ಕಾಣಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ಕುವೆಂಪು ಸಾಹಿತ್ಯದಲ್ಲಿ ವಿಜ್ಞಾನವಿದೆ. ಅವರ ವೈಜ್ಞಾನಿಕತೆ ವರ್ತಮಾನದಲ್ಲಿ ಪ್ರಚಲಿತ’ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಅಭಿಮತ ವ್ಯಕ್ತಪಡಿಸಿದರು.

ಮಹಿಳಾ ವಿ.ವಿ.ಯ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಗುರುವಾರ ನಡೆದ ‘ಕುವೆಂಪು ಕೃತಿಗಳಲ್ಲಿ ಬಹುತ್ವದ ನೆಲೆಗಳು’ ಕುರಿತ ಎರಡು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಲ್ಲ ಮಕ್ಕಳೂ ಸಾಫ್ಟ್‌ವೇರ್‌ ಎಂಜಿನಿಯರ್ ಆಗಬೇಕೆಂದು ಪಾಲಕರು ಬಯಸಬಾರದು. ಅವರವರ ಬುದ್ದಿಶಕ್ತಿಗೆ ತಕ್ಕಂತೆ ಅವರವರ ಪರಿಣಿತಿಯ ಕ್ಷೇತ್ರವನ್ನು ಆಯ್ದುಕೊಳ್ಳುವ ಅವಕಾಶ ನೀಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿ ದೆಸೆಯಿಂದ ಮಕ್ಕಳು ಬಹುತ್ವವನ್ನು ಸಾಧಿಸಲು ಸಾಧ್ಯ’ ಎಂದು ತಿಳಿಸಿದರು.

ಸಮಾರೋಪ ಭಾಷಣ ಮಾಡಿದ ಸಂಕೇಶ್ವರದ ನಿವೃತ್ತ ಪ್ರಾಧ್ಯಾಪಕ ಡಾ.ಗುರುಪಾದ ಮರಿಗುದ್ದಿ, ‘ಕುವೆಂಪು ಅವರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದ್ದು, ಅವರು ಕೇವಲ ಕನ್ನಡ ನಾಡಿನ ಕವಿ ಮಾತ್ರವಲ್ಲದೆ, ದೇಶದ ಮತ್ತು ಜಗತ್ತಿನ ಶ್ರೇಷ್ಠ ಕವಿಯಾಗಿದ್ದಾರೆ’ ಎಂದು ಹೇಳಿದರು.

ಮಹಿಳಾ ವಿ.ವಿ. ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಅಧ್ಯಕ್ಷತೆ ವಹಿಸಿದ್ದರು. ಸಂವಾದಕರಾಗಿ ಮಂಜುಳಾ ಜಯಪ್ರಕಾಶಗೌಡ, ನಂದಿನಿ ಜಯರಾಂ, ಡಾ.ಟಿ.ಸಿ.ಪೂರ್ಣಿಮಾ, ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ.ಬಿ.ಜಿ.ಬಿರಾದಾರ, ದಾಕ್ಷಾಯಿಣಿ ಹುಡೇದ, ಡಾ.ಆರ್.ರೇಣು, ಪ್ರೊ.ಮಹೇಶ ಚಿಂತಾಮಣಿ, ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ, ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ, ಖಜಾಂಚಿ ದೇವಾಂಗಿ ಮನುದೇವ, ಗೃಹ ಸಚಿವರ ಮಾಧ್ಯಮ ಸಲಹೆಗಾರ ಡಾ.ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ, ಮಹಿಳಾ ವಿ.ವಿ. ಕುಲಪತಿ ಪ್ರೊ.ಸಬಿಹಾ ಪಾಲ್ಗೊಂಡಿದ್ದರು.

ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿನಿಯರು ಕುವೆಂಪು ಗೀತೆ ಹಾಡಿದರು. ಕುಲಸಚಿವ ಪ್ರೊ.ಪಿ.ಜಿ.ತಡಸದ ಸ್ವಾಗತಿಸಿದರು. ಡಾ.ವಿಷ್ಣು ಶಿಂಧೆ ಪರಿಚಯಿಸಿದರು. ಡಾ.ಹನುಮಂತಯ್ಯ ಪೂಜಾರಿ ನಿರೂಪಿಸಿದರು. ಪ್ರೊ.ಓಂಕಾರ ಕಾಕಡೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !