ನಗರದಲ್ಲಿ ಲೇಬಲ್‌ ಬಜಾರ್

7
ಫ್ಯಾಷನ್

ನಗರದಲ್ಲಿ ಲೇಬಲ್‌ ಬಜಾರ್

Published:
Updated:
Prajavani

ಒಂಬತ್ತನೇ ಆವೃತಿಯ ಲೇಬಲ್‌ ಬಜಾರ್‌ ವಿಶೇಷ ಉಡುಗೆಗಳು ಮತ್ತು ಆಭರಣಗಳ ಪ್ರದರ್ಶನ ನಗರದಲ್ಲಿ ಗುರುವಾರ ನಡೆಯಿತು. ಲೇಬಲ್ ಬಜಾರ್‌ನ ಪ್ರಚಾರ ರಾಯಭಾರಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಪ್ರದರ್ಶನಕ್ಕೆ ಚಾಲನೆ ನೀಡಿದರು. 

ಶ್ರೀಕೃಷ್ಣ ಜ್ಯುವೆಲ್ಲರ್ಸ್‌ ಸಹಯೋಗದಲ್ಲಿ ಪ್ರಶಸ್ತಿ ಪುರಸ್ಕೃತ ವಿನ್ಯಾಸಗಾರರು ವಿನ್ಯಾಸ ಮಾಡಿದ ವಜ್ರ ಮತ್ತು ಚಿನ್ನಾಭರಣಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಆಭರಣಗಳ ಜತೆಗೆ ಸಾಂಪ್ರದಾಯಿಕ ಉಡುಗೆಗಳು, ವಿವಿಧ ವಿನ್ಯಾಸದ ಚಪ್ಪಲಿ ಮತ್ತು ಶೂಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.

ದೇಶದಾದ್ಯಂತ ಈಗಾಗಲೇ ಲೇಬಲ್ ಬಜಾರ್‌ 14 ಪ್ರದರ್ಶನಗಳನ್ನು ನೀಡಿದ್ದು, ನಗರದ ಯುಬಿ ಸಿಟಿಯಲ್ಲಿ ಸ್ಕೈಲಾಂಚ್‌ನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಫ್ಯಾಷನ್‌ ಪ್ರಿಯರ ಬಹುತೇಕ ಬ್ರ್ಯಾಂಡ್‌ಗಳ ಉತ್ಪನ್ನಗಳು ಈ ಪ್ರದರ್ಶನದಲ್ಲಿದ್ದವು.

‘ಕುಟುಂಬದ ಸದಸ್ಯರ ಕೆಲಸಗಳಲ್ಲಿ ಭಾಗಿಯಾಗುವುದೆಂದರೆ ಖುಷಿಯ ವಿಚಾರ. ನನ್ನ ತಂಗಿ ಅನಂ ಮಿರ್ಜಾ ಮತ್ತು ತಂಡ ಫ್ಯಾಷನ್‌ ಬಗ್ಗೆ ಹೆಚ್ಚು ಕಾಳಜಿ ತೋರುತ್ತಾರೆ. ಗ್ರಾಹಕರಿಗೆ ಇಷ್ಟವಾಗುವ ವಸ್ತು, ಆಭರಣಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ಗ್ರಾಹಕರು ಮೆಚ್ಚುವಂತಹ ಪ್ರದರ್ಶನ ಏರ್ಪಡಿಸಿದ್ದಾರೆ’ ಎಂದು ಸಾನಿಯಾ ಮಿರ್ಜಾ ಸಂತೋಷ ಹಂಚಿಕೊಂಡರು.

‘ಲೇಬಲ್ ಬಜಾರ್‌ ಪ್ರದರ್ಶನ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಈ ಸಂಸ್ಥೆಗೆ ರಾಯಭಾರಿ ಯಾಗಿರುವುದಕ್ಕೆ ಸಂತೋಷ ಎನಿಸುತ್ತಿದೆ. ಇದು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನ ಆಯೋಜಿಸಿದ್ದರೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ಹೇಳಿದರು. 

‘ನನಗೂ ಫ್ಯಾಷನ್ ಬಗ್ಗೆ ಕಾಳಜಿ ಹೆಚ್ಚು, ಈ ವಿಷಯದಲ್ಲಿ ನಾನು ಸ್ವಲ್ಪ ಭಿನ್ನ. ಚಿನ್ನಕ್ಕಿಂತ ಹೆಚ್ಚಾಗಿ ವಜ್ರಾಭರಣಗಳನ್ನೇ ಧರಿಸಲು ಬಯಸುತ್ತೇನೆ’ ಎಂದರು.

‘ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ದುಬೈ ನಗರಗಳಲ್ಲಿ ಲೇಬಲ್‌ ಬಜಾರ್ ಪ್ರದರ್ಶನದ ಜನ ಮನ್ನಣೆ ಗಳಿಸಿದೆ. ಐಟಿ ರಾಜಧಾನಿ ಬೆಂಗಳೂರಿನಲ್ಲೂ ಆಯೋಜಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ಮುಂದೆಯೂ ಇಂತಹ ಪ್ರದರ್ಶನಗಳನ್ನು ಆಯೋಜಿಸುವ ಉದ್ದೇಶವಿದೆ’ ಎಂದು ಅನಂ ಮಿರ್ಜಾ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !