ಗುರುವಾರ , ಅಕ್ಟೋಬರ್ 17, 2019
28 °C
ನಗರ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು

‘ಶೇ 80 ರಷ್ಟು ಲ್ಯಾಬೋರೇಟರಿ ಕೇಂದ್ರ ಕಾನೂನುಬಾಹಿರ’

Published:
Updated:

ಬೆಂಗಳೂರು: ‘ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬೋರೇಟರಿಗಳಲ್ಲಿ ಶೇ 80ರಷ್ಟು ಕೇಂದ್ರಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್‌ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದೆ. 

‘3,600 ಲ್ಯಾಬೋರೇಟರಿಗಳು ನಗರದಲ್ಲಿದ್ದು, ಇದರಲ್ಲಿ ಕೇವಲ 800 ಲ್ಯಾಬೋರೇಟರಿಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಲ್ಯಾಬೋರೇಟರಿಗಳು ಲೈಸೆನ್ಸ್ ಹೊಂದಿಲ್ಲ. ಅಲ್ಲದೇ, ನಿರ್ವಾಹಕರು ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (ಡಿಎಂಎಲ್‌ಟಿ) ಕೋರ್ಸ್‌ ಕೂಡಾ ಮಾಡಿರುವುದಿಲ್ಲ. ರಸ್ತೆಗಳ ಬದಿಯಲ್ಲಿಯೇ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುವ ಜತೆಗೆ ಕೋರ್ಸ್‌ ಮಾಡಿದವರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಸೋಸಿಯೇಷನ್ ಖಜಾಂಚಿ ಸುರೇಶ್ ಆಗ್ರಹಿಸಿದ್ದಾರೆ. 

‘ನಗರದಲ್ಲಿ 30ಕ್ಕೂ ಅಧಿಕ ಲ್ಯಾಬ್‌ಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಈ ವೇಳೆ ನಿಯಮಗಳ ಉಲ್ಲಂಘನೆ ಕಂಡುಬಂದಿದೆ. ಒಬ್ಬ ವ್ಯಕ್ತಿ ಐದಾರು ಕಡೆ ಲ್ಯಾಬೋರೇಟರಿಗಳನ್ನು ನಡೆಸುತ್ತಿದ್ದಾನೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಲಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. 

Post Comments (+)