‘ಲಕ್‌ಪತಿ ಖೇತಿ’ ಕೃಷಿ ಮಾದರಿ ಬಗ್ಗೆ ಸಿಎಂ ಜತೆ ಚರ್ಚೆ

7

‘ಲಕ್‌ಪತಿ ಖೇತಿ’ ಕೃಷಿ ಮಾದರಿ ಬಗ್ಗೆ ಸಿಎಂ ಜತೆ ಚರ್ಚೆ

Published:
Updated:

ಕಗ್ಗೋಡ (ವಿಜಯಪುರ): ‘ಭಾರತೀಯ ಸಂಸ್ಕೃತಿ ಉತ್ಸವ–5ಕ್ಕಾಗಿ ರೂಪಿಸಿದ್ದ, ಇಲ್ಲಿನ ‘ಲಕ್‌ಪತಿ ಖೇತಿ’ ಕೃಷಿ ತಾಕಿನ ಮಾದರಿ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಳಿ ಚರ್ಚಿಸುವೆ’ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

ಕೊಲ್ಹಾಪುರದ ಕನ್ಹೇರಿ ಮಠದ ಅದೃಶಕಾಡಸಿದ್ಧೇಶ್ವರ ಸ್ವಾಮೀಜಿ ಆಶಯದಂತೆ ಉತ್ಸವಕ್ಕಾಗಿ ಕಗ್ಗೋಡದಲ್ಲಿ ರೂಪಿಸಿದ್ದ ಕೃಷಿ ತಾಕಿಗೆ ಬುಧವಾರ ಭೇಟಿ ನೀಡಿ ವೀಕ್ಷಿಸಿದ ಸಚಿವರು, ‘ಇದೊಂದು ರೈತ ಪರ ಯೋಜನೆ. ಎಲ್ಲೆಡೆ ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ ಸೇರ್ಪಡೆ ಮಾಡುವಂತೆ ಸಿಎಂ ಜತೆ ಮಾತನಾಡುವೆ’ ಎಂದು ಹೇಳಿದರು.

‘ಭವಿಷ್ಯದ ದಿನಗಳಲ್ಲಿ ಈ ಮಾದರಿಯ ಕೃಷಿ ಸಣ್ಣ ರೈತರಿಗೆ ಅನುಕೂಲಕಾರಿಯಾಗಲಿದೆ. ವರದಾನವೂ ಆಗಲಿದೆ’ ಎಂದು ಕೃಷಿ ತಾಕಿನ ವೀಕ್ಷಣೆ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !