ಮಳೆಯ ನಡುವೆಯೂ ಮನತಣಿಸಿಕೊಂಡ ಜನ

7

ಮಳೆಯ ನಡುವೆಯೂ ಮನತಣಿಸಿಕೊಂಡ ಜನ

Published:
Updated:
Deccan Herald

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ  ಭಾನುವಾರ ಜನಸ್ತೋಮ ಹರಿದು ಬಂದಿತ್ತು.

ಆಗಾಗ ಬಂದು ಹೋಗುವ ಮಳೆಯ ನಡುವೆಯೂ ವೀಕ್ಷಕರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಜನ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದರು. ಆದರೆ, ಟಿಕೆಟ್ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಾಗಲಿಲ್ಲ. ನರ್ಸರಿಗಳ ಬಳಿ ಸಸಿಗಳನ್ನು ಖರೀದಿಸುವಲ್ಲಿ, ಮಾರಾಟ ಮಳಿಗೆಗಳ ಬಳಿ ಜನಸಂದಣಿ ಹೆಚ್ಚಾಗಿಯೇ ಇತ್ತು. 

ಹಸಿರು ದಳ, ಬ್ಯೂಟಿಫುಲ್ ಬೆಂಗಳೂರು ಸೇರಿದಂತೆ ಇತರ ಸಂಘಟನೆಗಳು ಇಡೀ ಉದ್ಯಾನವನ್ನು ಸುತ್ತುತ್ತಾ, ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ತೆಗೆದರು. ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. 

ಸಂಚಾರ ದಟ್ಟಣೆ: ವಾಹನ ಸವಾರರು ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಮಳೆಯ ಅವಾಂತರದಿಂದಾಗಿ ಉದ್ಯಾನದ ಜೋಡಿ ರಸ್ತೆ ಹಾಗೂ ಸಿದ್ದಾಪುರ ಗೇಟ್ ಬಳಿ ವಾಹನ ದಟ್ಟಣೆ ಉಂಟಾಗಿತ್ತು. ಸಂಜೆ ಹೊಸೂರು ರಸ್ತೆಯ ಕೆಲವೆಡೆ ಸಂಚಾರ ದಟ್ಟಣೆ ಕಂಡು ಬಂದಿತು.

ಅಂಕಿ ಅಂಶ

ವಯಸ್ಕರು; 66,120

ಮಕ್ಕಳು; 4,010

ಒಟ್ಟು;70,130

ಶುಲ್ಕ ಸಂಗ್ರಹ; ₹44.82 ಲಕ್ಷ

9 ದಿನಗಳಲ್ಲಿ ಭೇಟಿ ನೀಡಿದವರು, ಶುಲ್ಕ ಸಂಗ್ರಹ  

ವಯಸ್ಕರು; 2.11 ಲಕ್ಷ

ಮಕ್ಕಳು; 68,500

ಒಟ್ಟು;2.80 ಲಕ್ಷ

ಶುಲ್ಕ ಸಂಗ್ರಹ; ₹1.40 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !