ಗುಲಾಬಿಯಲ್ಲಿ ಮೈದಳೆದಿದೆ ಸೇನೆಯ ಚರಿತ್ರೆ

7

ಗುಲಾಬಿಯಲ್ಲಿ ಮೈದಳೆದಿದೆ ಸೇನೆಯ ಚರಿತ್ರೆ

Published:
Updated:

ಬೆಂಗಳೂರು: ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಪ್ರೀತಿ, ಶಾಂತಿ ಸಂಕೇತವಾದ ಗುಲಾಬಿಯ ಹೂವುಗಳಲ್ಲಿ ಮೈದಳೆದಿರುವ ಯುದ್ಧ ಭೂಮಿಯ ವಾತಾವರಣ ನೋಡುಗರ ಮೈನವಿರೇಳಿಸುತ್ತಿತ್ತು.

208ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ಚಾಲನೆ ನೀಡಿದರು. ಭಾರತೀಯ ಸೇನೆಯ ಸಾಮರ್ಥ್ಯ, ಸಾಧನೆ ಹಾಗೂ ಶೌರ್ಯವನ್ನು ಪರಿಚಯಿಸುವ ವಿಷಯವನ್ನೇ ಆಯ್ದುಕೊಂಡಿದೆ.

ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ಕಾಣುವ 'ಅಮರ್‌ ಜವಾನ್‌ ಜ್ಯೋತಿ' ಯುದ್ಧ ಸ್ಮಾರಕ ಜನರನ್ನು ಕೆಲಕಾಲ ಹಿಡಿದು ನಿಲ್ಲಿಸುತ್ತಿತ್ತು. ‘ಅಮ್ಮ ಗನ್‌ ನೋಡು’ ಎಂದು ಹೇಳುವ ಮಗುವಿಗೆ, ಯೋಧರ ಪ್ರಾಣತ್ಯಾಗದ ಕಥೆ ಹೇಳುವ ಆ ತಾಯಿಯ ಕಣ್ಣಂಚಿನಲ್ಲಿ ಹನಿಯೊಂದು ಮಿಂಚಿ ಮರೆಯಾಯಿತು. ಇದೆಲ್ಲವನ್ನು ಮುಗ್ಧವಾಗಿ ಕೇಳಿಸಿಕೊಳ್ಳುತ್ತಿದ್ದ ಮಗುವಿನಿಂದ ಪ್ರೀತಿಯ ಸೆಲ್ಯೂಟ್‌ ಮಾಡಿಸಿದರು. ಹೀಗೆ ಇಲ್ಲಿಗೆ ಬರುವ ಪ್ರತಿಯೊಬ್ಬರು ಗಡಿ ಕಾಯುವ ಯೋಧರಿಗೆ ಮನದಲ್ಲಿಯೇ ಸ್ಮರಿಸಿ, ಗೌರವಿಸುತ್ತಿದ್ದರು.

ಹಿಮಾಲಯದ ತಪ್ಪಲಿನಲ್ಲಿ ಸದ್ದಿಲ್ಲದೆ ಕುಳಿತಿದ್ದ ಯುದ್ಧ ಟ್ಯಾಂಕರ್‌, ಮೌನವಾಗಿ ನಿಂತಿದ್ದ ಯೋಧರು, ಸಮುದ್ರದಲ್ಲಿ ದೇಶ ರಕ್ಷಣೆಗೆ ನಿಂತ ಹಡುಗು, ಶಿಖರದ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಯುದ್ಧ ವಿಮಾನ... ಹೀಗೆ ಮೂರೂ ಪಡೆಗಳ ವಿರಾಟ್‌ ರೂಪವೇ ಅಲ್ಲಿ ಮೈದೆಳೆದಿದೆ.

ಭೂಸೇನೆ, ವಾಯುಸೇನೆ, ನೌಕಸೇನೆಯ ಲಾಂಛನಗಳು, ಯುದ್ಧ ಪರಿಕರಗಳು, ಯೋಧರ ಪರಿಚಯ ಫಲಕಗಳು, ಸಿಯಾಚಿನ್‌ ಹಿಮಪರ್ವತಗಳು, ಯೋಧರಿಗೆ ನೀಡುವ ಪ್ರಶಸ್ತಿಗಳು – ಈ ಎಲ್ಲ ವಿವರಗಳನ್ನು ಒಳಗೊಂಡ ಪರಿಚಯಾತ್ಮಕ ಫಲಕಗಳನ್ನು ಸುತ್ತಲೂ ಹಾಕಲಾಗಿತ್ತು. ಸೇನೆಯ ಸಮಗ್ರ ಪರಿಚಯ ಮತ್ತು ಮಹತ್ವದ ಕುರಿತು ತಿಳಿಸುವ ಪ್ರಯತ್ನ ಇಲ್ಲಿತ್ತು.

ಗಾಜಿನಮನೆಯ ಹೊರಭಾಗದಲ್ಲಿ ಸೇನಾ ಪಡೆ ಮತ್ತು ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಯುದ್ಧ ಸಾಮಗ್ರಿಗಳ ಮಾದರಿಗಳನ್ನು ಭತ್ತದ ಹುಲ್ಲು, ಥರ್ಮೋಕೋಲ್‌ ಮತ್ತು ಹೂವುಗಳಿಂದ ನಿರ್ಮಿಸಲಾಗಿದೆ. ನೈಜ ಬಂದೂಕುಗಳನ್ನು ಹಿಡಿದು ಅದರ ಕಾರ್ಯವೈಖರಿ, ಯುದ್ಧದ ಬಗ್ಗೆ ಸೈನಿಕರು ವಿವರಿಸುತ್ತಿದ್ದರೆ, ಜನ ಕಣ್ಣರಳಿಸಿಕೊಂಡು ಕೇಳುತ್ತಿದ್ದರು.

ಭದ್ರತೆಗೆ ಹೆಚ್ಚಿನ ಒತ್ತು: ಭದ್ರತೆಗೆ 150 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಲಾಲ್‌ಬಾಗ್‌ನ ವಿವಿಧ ಭಾಗಗಳಲ್ಲಿ 100 ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 

ಆಗಸ್ಟ್‌ 4ರಿಂದ 15ರವರೆಗೆ ಒಟ್ಟು 12 ದಿನಗಳ ಪ್ರದರ್ಶನದಲ್ಲಿ ನಾಲ್ಕು ವಾರದ ರಜೆಗಳು ಬರುತ್ತವೆ. ಈ ರಜಾ ದಿನಗಳು ಮತ್ತು ವಿಶೇಷವಾಗಿ ಕೊನೆಯ ದಿನ ಅತ್ಯಧಿಕ ಜನಸಂದಣಿ ಇರುತ್ತದೆ. ವಾರದ ಮೊದಲ ಐದು ದಿನಗಳಲ್ಲಿ ಬಂದರೆ ಪ್ರದರ್ಶನವನ್ನು ವಿವರವಾಗಿ ನೋಡಬಹುದು. ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪ್ರವೇಶಕ್ಕೆ ಅವಕಾಶ. 

ಕನ್ನಡ ಚಿತ್ರರಂಗಕ್ಕೆ 85ರ ಸಂಭ್ರಮ:  ಗಾಜಿನ ಮನೆಯ ಹಿಂಭಾಗದಲ್ಲಿ ಚಿತ್ರಲೋಕ ಸೃಷ್ಟಿಯಾಗಿದೆ. ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬುತ್ತಿರುವ ಸಂಭ್ರಮದ ಪ್ರಯುಕ್ತ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ಪರಿಚಯಿಸಲಾಗಿದೆ. ಅಂದಿನ ಸಿನಿಮಾ ರೀಲ್‌ಗಳನ್ನು ಪ್ರಕೃತಿ ಹೂವಿನಲ್ಲಿ ಅದ್ಭುತವಾಗಿ ರೂಪಿಸಲಾಗಿತ್ತು.  ಚಿತ್ರರಂಗದ ಸಾಧಕರಿಗೆ ಸಂದ ಪ್ರಶಸ್ತಿಗಳು, ಪಾರಿತೋಷಕಗಳ ಸಂಪೂರ್ಣ ವಿವರಗಳು ಇಲ್ಲಿದ್ದವು.

ಈ ಬಾರಿ ಸ್ವಚ್ಛತೆಗೆ ಒತ್ತು : ಲಕ್ಷಾಂತರ ಮಂದಿ ಭೇಟಿ ನೀಡುವ ಜಾಗದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ದೊಡ್ಡ ಸವಾಲಾಗಿರುತ್ತದೆ. ತೋಟಗಾರಿಕೆ ಇಲಾಖೆ ಈ ಬಾರಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದು, ಎಲ್ಲೆಂದರಲ್ಲಿ ಕಸವನ್ನು ಬಿಸಾಡಬಾರದು ಎಂದು ಆಗಾಗ ಧ್ವನಿವರ್ಧಕದಲ್ಲಿ ಘೋಷಿಸಲಾಗುತ್ತಿತ್ತು.

ಈ ಬಾರಿ ಸ್ವಚ್ಛತೆಗೆ ಒತ್ತು

ಲಕ್ಷಾಂತರ ಮಂದಿ ಭೇಟಿ ನೀಡುವ ಜಾಗದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ದೊಡ್ಡ ಸವಾಲು. ತೋಟಗಾರಿಕೆ ಇಲಾಖೆ ಈ ಬಾರಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದು, ಎಲ್ಲೆಂದರಲ್ಲಿ ಕಸವನ್ನು ಬಿಸಾಡಬಾರದು ಎಂದು ಆಗಾಗ ಧ್ವನಿವರ್ಧಕದಲ್ಲಿ ಘೋಷಿಸಲಾಗುತ್ತಿತ್ತು.

ಕನ್ನಡ ಚಿತ್ರರಂಗಕ್ಕೆ 85ರ ಸಂಭ್ರಮ

ಗಾಜಿನ ಮನೆಯ ಹಿಂಭಾಗದಲ್ಲಿ ಚಿತ್ರಲೋಕ ಸೃಷ್ಟಿಯಾಗಿದೆ. ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬುತ್ತಿರುವ ಸಂಭ್ರಮದ ಪ್ರಯುಕ್ತ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ಪರಿಚಯಿಸಲಾಗಿದೆ. ಅಂದಿನ ಸಿನಿಮಾ ರೀಲ್‌ಗಳನ್ನು ಪ್ರಕೃತಿ ಹೂವಿನಲ್ಲಿ ಅದ್ಭುತವಾಗಿ ರೂಪಿಸಲಾಗಿತ್ತು.  

ಚಿತ್ರರಂಗದ ಸಾಧಕರಿಗೆ ಸಂದ ಪ್ರಶಸ್ತಿಗಳು, ಪಾರಿತೋಷಕಗಳ ಸಂಪೂರ್ಣ ವಿವರಗಳು ಇಲ್ಲಿದ್ದವು.

* ವಿಧವಿಧವಾದ ಹೂವುಗಳಿಂದ ಅಲಂಕಾರಗೊಂಡಿರುವ ಅಪರೂಪ ಸೇನಾಪಡೆಯ ದೃಶ್ಯಗಳನ್ನು ಪ್ರವಾಸಿಗರು ಕಣ್ಣು ತುಂಬಿಕೊಳ್ಳಬೇಕು

-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ 

* ₹8.29 ಲಕ್ಷ ಮೊದಲ ದಿನ ಸಂಗ್ರಹವಾದ ಪ್ರವೇಶ ಶುಲ್ಕದ ಮೊತ್ತ

* 14,789 ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಜನ

* ದೊಡ್ಡವರಿಗೆ ₹70 ಪ್ರವೇಶ ಶುಲ್ಕ

* 12 ವರ್ಷದೊಳಗಿನವರಿಗೆ ₹20

* ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !