ಸಸ್ಯಕಾಶಿಯಲ್ಲಿ 150 ಗಿಡಗಳ ನಾಟಿ

7
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 208ನೇ ಫಲಪುಷ್ಪ ಪ್ರದರ್ಶನ

ಸಸ್ಯಕಾಶಿಯಲ್ಲಿ 150 ಗಿಡಗಳ ನಾಟಿ

Published:
Updated:

ಬೆಂಗಳೂರು: ‘ಸಸ್ಯಕಾಶಿಯಲ್ಲಿ ಸುಮಾರು 5 ಎಕರೆ ಜಾಗದಲ್ಲಿ 5 ಪ್ರಬೇಧದ 150 ಗಿಡಗಳನ್ನು ನೆಡಲಾಗಿದೆ’ ಎಂದು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು.

‘ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ 208ನೇ ಫಲಪುಷ್ಪ ಪ್ರದರ್ಶನದ ನಿಮಿತ್ತ ಮಂಗಳವಾರ ಸಸ್ಯಕಾಶಿಯ ಜೋಡಿ ರಸ್ತೆ ಬಳಿಯ ಪಾರ್ಕಿಂಗ್‌ ಪ್ರದೇಶದಲ್ಲಿ ಗಿಡ ನೆಡಲಾಗಿದೆ’ ಎಂದರು.

‘ಪ್ರದರ್ಶನಕ್ಕೆ 16,020 ಜನ ಭೇಟಿ ನೀಡಿದ್ದು, ಪ್ರವೇಶ ಶುಲ್ಕದಿಂದ ₹6.63 ಲಕ್ಷ ಸಂಗ್ರಹವಾಗಿದೆ’ ಎಂದು ಹೇಳಿದರು. 

‘ಭದ್ರತೆ ದೃಷ್ಟಿಯಿಂದ ಲಾಲ್‌ಬಾಗ್‌ನಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನೇಮಿಸಲಾಗಿದೆ. ಆದರೆ, ಮಂಗಳವಾರ ಅಷ್ಟೊಂದು ತಳ್ಳಾಟದ, ಅಹಿತಕರ ಘಟನೆಗಳು ನಡೆದಿಲ್ಲ’ ಎಂದು ಜಗದೀಶ್‌ ಹೇಳಿದರು.

ದೇಶದ ರಕ್ಷಣಾ ಪಡೆಗಳಿಗೆ ಪುಷ್ಪನಮನ ಸಲ್ಲಿಸುತ್ತಿರುವುದು ಈ ಬಾರಿಯ ಆಕರ್ಷಣೆ. ಕನ್ನಡ ಚಿತ್ರರಂಗ 85 ವಸಂತಗಳನ್ನು ಪೂರೈಸಿರುವುದರಿಂದ ಚಿತ್ರರಂಗದ ಸಾಧನೆಗೂ ಪುಷ್ಪ ಗೌರವ ಸಲ್ಲಿಸಲಾಗುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !