ಸರ್ಕಾರಿ ಜಮೀನು ಒತ್ತುವರಿ: 1 ವರ್ಷ ಜೈಲು

7

ಸರ್ಕಾರಿ ಜಮೀನು ಒತ್ತುವರಿ: 1 ವರ್ಷ ಜೈಲು

Published:
Updated:

ಬೆಂಗಳೂರು: ಸರ್ಕಾರಿ ಖರಾಬು ಜಮೀನು ಒತ್ತುವರಿ ಮಾಡಿದ ದೊಡ್ಡನೆಕ್ಕುಂದಿಯ ಆಪಾದಿತ ರಂಜನ್‌ ನಾಯಕ್‌ ಎಂಬಾತನಿಗೆ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಗ್ರಾಮದ ಸರ್ವೆ ಸಂಖ್ಯೆ 15ರಲ್ಲಿ 12 ಗುಂಟೆ ಕಬಳಿಕೆ ಮಾಡಿ ಕಟ್ಟಡ ನಿರ್ಮಿಸಿದ್ದರು. ಭೂ ಕಬಳಿಕೆ ಬಗ್ಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ವರದಿ ಸಲ್ಲಿಸಿದ್ದರು. ಈ ಒತ್ತುವರಿ ಬಗ್ಗೆ ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿಯಲ್ಲಿ ಉಲ್ಲೇಖಿಸಲಾಗಿತ್ತು.

ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಬಿ.ಎಸ್‌.‍ಪಾಟೀಲ ವಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !