ಜಮೀನು ವಿವಾದ : ಮಾವಿನ ಮರಗಳ ಮಾರಣಹೋಮ

7

ಜಮೀನು ವಿವಾದ : ಮಾವಿನ ಮರಗಳ ಮಾರಣಹೋಮ

Published:
Updated:

ಹೊಸಕೋಟೆ: ಗುಂಪೊಂದು ಅಕ್ರಮವಾಗಿ ಮಾವಿನ ತೋಪಿಗೆ ನುಗ್ಗಿ ಅಲ್ಲಿದ್ದ 100 ಮಾವಿನ ಮರಗಳನ್ನು ಕೊಡಲಿಯಿಂದ ಕಡಿದು ನೆಲಕ್ಕುರುಳಿಸಿದ ಘಟನೆ ತಾಲ್ಲೂಕಿನ ಯಲಚಾಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಇದರಿಂದ ಸುಮಾರು ₹ 15 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಬಿಳಿಶಿವಾಲೆ ಗ್ರಾಮದ ಲಕ್ಷ್ಮಣ್ ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ.

’ಸುಮಾರು 20 ವರ್ಷಗಳ ಹಿಂದಿನ ಆ ಮಾವಿನ ಮರಗಳನ್ನು 6.12 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದು ಉತ್ತಮ ಫಸಲು ನೀಡುತ್ತಿದ್ದವು. 2006ರಲ್ಲಿ ನಮ್ಮ ತಂದೆ ಆ ಜಮೀನನ್ನು ಕೊಂಡಿದ್ದು ಅವರ ಮರಣದ ನಂತರ ಅದು ನನ್ನ ಹೆಸರಿಗೆ ವರ್ಗಾವಣೆ ಆಗಿತ್ತು. ಶನಿವಾರ ದೊಡ್ಡದೇನಹಳ್ಳಿ ವಾಸಿಗಳಾದ ಚೌಡಪ್ಪ ಹಾಗೂ ಇತರ 6 ಜನ ಏಕಾಏಕಿ ಮಾವಿನ ತೋಪಿಗೆ ನುಗ್ಗಿ ಮರಗಳನ್ನು ಕಡಿದಿದ್ದಾರೆ. ಜತೆಗೆ ಕಾಂಪೌಂಡ್ ಹಾಕಿಸಲು ಹಾಕಿದ್ದ 250 ಕಲ್ಲು ಕಂಬಗಳನ್ನೂ ಸಹ ಧ್ವಂಸ ಮಾಡಿದ್ದಾರೆ. ಪ್ರಶ್ನಿಸಿದ ನನಗೆ ಈ ಜಮೀನು ನಮಗೆ ಸೇರಿದ್ದು ಇಲ್ಲಿಂದ ಆಚೆ ಹೋಗದಿದ್ದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದರು’ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !