ಪೊಲೀಸರ ಬಳಕೆಗೆ ಲೇಸರ್‌ ಗನ್‌

7
ಚೀನಾ ಕಂಪನಿಯಿಂದ ಅಭಿವೃದ್ಧಿ: ಪ್ರತಿಭಟನಾಕಾರರ ವಿರುದ್ಧ ಬಳಸಲು ಸುಲಭ

ಪೊಲೀಸರ ಬಳಕೆಗೆ ಲೇಸರ್‌ ಗನ್‌

Published:
Updated:
s

ಬೀಜಿಂಗ್‌: ಚೀನಾದ ಕಂಪನಿಯೊಂದು ಪೊಲೀಸರ ಬಳಕೆಗಾಗಿ ಲೇಸರ್‌ ಗನ್‌ ಅಭಿವೃದ್ಧಿಪಡಿಸಿದೆ.

ಯಾವುದೇ ವ್ಯಕ್ತಿ ಮೇಲೆ ಈ ಗನ್‌ ಪ್ರಯೋಗಿಸಿದಾಗ ಆತನಿಗೆ ತಕ್ಷಣವೇ ತೀವ್ರ ನೋವು ಉಂಟಾಗುತ್ತದೆ. ಆದರೆ, ಇದರಿಂದ ಜೀವ ಹಾನಿಯಾಗುವುದಿಲ್ಲ. ಬಂದೂಕಿನಂತೆ ಸಾಯಿಸಲು ಈ ಗನ್‌ ಅನ್ನು ವಿನ್ಯಾಸಗೊಳಿಸಿಲ್ಲ ಎಂದು ‘ಝಕೆಝಎಂ’ ಕಂಪನಿಯ ಪ್ರಧಾನ ವ್ಯವಸ್ಥಾಪಕರೊಬ್ಬರು ತಿಳಿಸಿದ್ದಾರೆ.

ಮೂರು ಕೆ.ಜಿ. ತೂಕ ಹೊಂದಿರುವ ಈ ಗನ್‌, 800 ಮೀಟರ್‌ ದೂರದವರೆಗೆ ತಲುಪುವ ಸಾಮರ್ಥ್ಯ ಹೊಂದಿದೆ. ಗಾಜು ಸೇರಿದಂತೆ ಯಾವುದೇ ಪಾರದರ್ಶಕ ವಸ್ತುಗಳನ್ನು ಹಾದು ಹೋಗುತ್ತದೆ.

ಕಾರು, ಬೋಟ್‌ಗಳು ಮತ್ತು ವಿಮಾನಗಳ ಮೇಲೆಯೂ ಈ ಗನ್‌ ಅಳವಡಿಸಬಹುದು. ಅಪಾರ ಪ್ರಮಾಣದಲ್ಲಿ ಈ ಗನ್‌ಗಳನ್ನು ತಯಾರಿಸಲು ರಕ್ಷಣಾ ಉದ್ಯಮ ವಲಯದಲ್ಲಿನ ಕಂಪನಿಗಳ ಜತೆ ಸಹಭಾಗಿತ್ವ ಹೊಂದುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಈ ಲೇಸರ್‌ನ ಸಾಮರ್ಥ್ಯವನ್ನು ಹೆಚ್ಚಿಸಿ ಜೀವಕ್ಕೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ತಯಾರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಜೀವ ತೆಗೆಯುವ ಲೇಸರ್‌ ಗನ್‌ಗಳನ್ನು ಅಭಿವೃದ್ಧಿಪಡಿಸದಂತೆ ಅಂತರರಾಷ್ಟ್ರೀಯ ಒಪ್ಪಂದಗಳಿವೆ.

ಈ ರೀತಿಯ ಶಸ್ತ್ರಾಸ್ತ್ರಗಳು ಅಮಾನವೀಯವಾಗಿದ್ದು, ಊಹಿಸಲಾರದಷ್ಟು ನೋವು ಉಂಟು ಮಾಡುತ್ತವೆ ಎನ್ನುವ ಅಂಶಗಳು ಈ ಒಪ್ಪಂದದಲ್ಲಿವೆ. ಹೀಗಾಗಿ, ಯಾವ ರೀತಿಯಲ್ಲಿ ಈ ಶಸ್ತ್ರಾಸ್ತ್ರದ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !