ಬಟ್ಟೆ ಆಯ್ಕೆ ನನ್ನ ಹಕ್ಕು: ಲಾಸ್ಯಾ

7

ಬಟ್ಟೆ ಆಯ್ಕೆ ನನ್ನ ಹಕ್ಕು: ಲಾಸ್ಯಾ

Published:
Updated:
Deccan Herald

‘ಪುರುಷರು ಮಹಿಳೆಯರನ್ನು ಗೌರವಿಸಬೇಕು. ಮಹಿಳೆ ಬೆತ್ತಲಾಗಿರಲಿ, ಸೀರೆ ಉಟ್ಟಿರಲಿ ಅಥವಾ ಪಾಶ್ಚಿಮಾತ್ಯ ಶೈಲಿಯ ಬಟ್ಟೆ ತೊಟ್ಟಿರಲಿ– ಪುರುಷ ಆಕೆಯನ್ನು ಗೌರವದಿಂದ ಕಾಣಬೇಕು....’ ಎನ್ನುತ್ತಾರೆ ನಟಿ ಲಾಸ್ಯಾ ನಾಗರಾಜ್‌.

ಚುರುಕಿನ ಮಾತುಗಳಿಂದಾಗಿ ‘ಚಂದನವನ’ದಲ್ಲಿ ಹೆಸರು ಮಾಡಿದವರು ಲಾಸ್ಯಾ. ಅಂದಹಾಗೆ, ಅವರು ಈ ಮಾತು ಆಡಿದ್ದು ಈಗೇಕೆ ಎಂಬ ಪ್ರಶ್ನೆಯೇ? ಅದಕ್ಕೊಂದು ಕಾರಣ ಇದೆ. ಅವರು ಪುದುಚೇರಿಗೆ ಹೋಗಿ ಫೋಟೊಶೂಟ್‌ ಮಾಡಿಸಿಕೊಂಡು ಬಂದಿದ್ದಾರೆ. ಇದರಲ್ಲಿನ ಚಿತ್ರಗಳು ಬೋಲ್ಡ್‌ ಆಗಿ ಇವೆ. ಈ ಫೋಟೊಗಳನ್ನು ಅವರು ‘ಇನ್‌ಸ್ಟಾಗ್ರಾಂ’ ಮೂಲಕ ಹಂಚಿಕೊಂಡಿದ್ದಾರೆ.

‘ಯಾವ ಬಟ್ಟೆ ತೊಡಬೇಕು ಎಂಬುದು ವ್ಯಕ್ತಿಯ ಹಕ್ಕು. ಹೆಣ್ಣೊಬ್ಬಳು ಕಡಿಮೆ ಬಟ್ಟೆ ತೊಟ್ಟಿದ್ದಾಳೆ ಎಂಬ ಕಾರಣಕ್ಕೆ ಆಕೆ ಕೆಟ್ಟವಳಾಗುವುದಿಲ್ಲವಲ್ಲ. ಹಾಗೆಯೇ ಮೈತುಂಬ ಬಟ್ಟೆ ತೊಟ್ಟುಕೊಂಡ ಕಾರಣಕ್ಕೆ ಆಕೆ ಅತ್ಯಂತ ಗೌರವಯುತ ವ್ಯಕ್ತಿ ಆಗುವುದೂ ಇಲ್ಲ’ ಎಂದು ಲಾಸ್ಯಾ ಅವರು ಫೋಟೊಶೂಟ್‌ ವಿಚಾರವಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಅವರ ಫೋಟೊಶೂಟ್‌ ಈಗ ಸಿನಿಮಾ ಪ್ರಿಯರಲ್ಲಿ ಚರ್ಚೆಯ ವಸ್ತುವಾಗಿದೆ.

ಫೋಟೊಶೂಟ್‌ನ ಒಂದು ಚಿತ್ರಕ್ಕೆ 11 ಸಾವಿರಕ್ಕೂ ಹೆಚ್ಚಿನ ಲೈಕ್‌ಗಳು ಬಂದಿವೆ. ಅಂದಹಾಗೆ, ಹೀಗೆ ಬೋಲ್ಡ್‌ ಆಗಿ ಚಿತ್ರ ತೆಗೆಸಿಕೊಳ್ಳಬೇಕು ಎಂಬ ಆಸೆ ಲಾಸ್ಯಾ ಅವರಲ್ಲಿ ಒಂದೆರಡು ವರ್ಷಗಳಿಂದಲೂ ಇತ್ತಂತೆ. ಮುಂದೆ ಸಿನಿಮಾಗಳಲ್ಲಿ ಬೋಲ್ಡ್‌ ಆಗಿರುವ ಪಾತ್ರಗಳೇನಾದರೂ ಸಿಕ್ಕರೆ, ಅದನ್ನು ನಿಭಾಯಿಸಲು ಸಿದ್ಧ ಎಂಬ ಸಂದೇಶವನ್ನೂ ನೀಡಬೇಕಿತ್ತಂತೆ ಅವರು. ಆದರೆ ಕಾರಣವೇ ಇಲ್ಲದೆ ದೇಹವನ್ನು ಎಕ್ಸ್‌ಪೋಸ್‌ ಮಾಡಲು ತಾನು ಸಿದ್ಧವಿಲ್ಲ ಎಂಬ ಮಾತನ್ನು ಅವರು ಹೇಳುತ್ತಾರೆ.

ಈ ಫೋಟೊಶೂಟ್‌ಗೆ ನೆಗೆಟಿವ್‌ ಆಗಿರುವ ಪ್ರತಿಕ್ರಿಯೆಗಳೇ ಹೆಚ್ಚು ಬರಬಹುದು ಎಂದು ಲಾಸ್ಯಾ ನಿರೀಕ್ಷಿಸಿದ್ದರಂತೆ. ಆದರೆ, ಇನ್‌ಸ್ಟಾಗ್ರಾಂನಲ್ಲಿ ಫೋಟೊ ನೋಡಿದ ಬಹುತೇಕರು ಒಳ್ಳೆಯ ರೀತಿಯಿಂದಲೇ ಪ್ರತಿಕ್ರಿಯೆ ನೀಡಿದ್ದಾರಂತೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !