ನಗುವೆಂಬ ಸೌಂದರ್ಯ

7

ನಗುವೆಂಬ ಸೌಂದರ್ಯ

Published:
Updated:

ಸೌಂದರ್ಯ ಎಂಬುದು ಒಂದು ಪ್ರಜ್ಞೆ, ಒಂದು ಜಾಗೃತಿ, ಒಂದು ಆತ್ಮವಿಶ್ವಾಸ. ತುಟಿಯ ರಂಗುಗಳಲ್ಲಿ, ಕಣ್ಣ ಮಸ್ಕರಾಗಳಲ್ಲಿ ಇರುವುದು ಮೇಕಪ್ಪೇ ಹೊರತು ಅದು ಸೌಂದರ್ಯವಲ್ಲ.

ಮಾರುಕಟ್ಟೆಯ ಸೌಂದರ್ಯವರ್ಧಕಗಳನ್ನು ಹಚ್ಚಿಕೊಂಡು ತನ್ನ ಸೌಂದರ್ಯ ಇಮ್ಮಡಿಸಿತು ಎಂದು ಬೀಗಿದರೆ ಅದು ಕೇವಲ ತೋರ್ಪಡಿಕೆ ಆಗುತ್ತದೆ. ಅಳುವ ಮಗು ತಾಯಿಯ ಕಂಡೊಡನೆ ಅವಳ ಲಾಲಿ ಹಾಡಿಗೆ, ಅವಳ ಪ್ರೀತಿಗೆ ಸೋಲುತ್ತದೆಯೇ ಹೊರತು ಅವಳ ಸೌಂದರ್ಯಕ್ಕಲ್ಲ.

ಸಾವಿರಾರು ರೋಗಿಗಳನ್ನು ತನ್ನ ಮಕ್ಕಳಂತೆ ಸಲಹಿ ಕಾಪಾಡಿದ ಮದರ್ ತೆರೇಸಾ ಅವರಲ್ಲಿ ಇದ್ದದ್ದು ಮಮತೆಯ ಸೌಂದರ್ಯವೇ ಹೊರತು ದೇಹ ಸೌಂದರ್ಯವಲ್ಲ. ಜಗತ್ತೇ ಮಾರು ಹೋಗಿರುವ ಮೊನಾಲಿಸಾಳ ಮುಗುಳುನಗೆಯಲ್ಲಿ ಅಡಗಿರುವುದು ಮುಗ್ಧತೆಯ ಸೌಂದರ್ಯವೇ ಹೊರತು ಕೃತಕ ಸೌಂದರ್ಯವಲ್ಲ. ಮನಸ್ಸು ನಿರ್ಮಲವಾಗಿದ್ದರೆ ಅದು ಮುಖದಲ್ಲಿ ಗೋಚರಿಸುತ್ತದೆ. ಆಗ ಸೌಂದರ್ಯವೆಂಬುದು ತಾನಾಗೇ ಇಮ್ಮಡಿಸುತ್ತದೆ. ಮುಖದ ಮೇಲೆ ನಗುವೆಂಬ ಶಾಶ್ವತ ಸೌಂದರ್ಯವರ್ಧಕವನ್ನು ಉಪಯೋಗಿಸೋಣ. ಆಗ ಖರ್ಚೂ ಉಳಿಯುತ್ತದೆ. ನಮ್ಮ ಆತ್ಮಬಲವೂ ಹಿಗ್ಗುತ್ತದೆ. ಅಲ್ಲವೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !