ಭಾರತದ ಸಿಬ್ಬಂದಿ ಇದ್ದ ಎರಡು ಹಡಗುಗಳಿಗೆ ರಷ್ಯಾ ಕರಾವಳಿಯಲ್ಲಿ ಬೆಂಕಿ: 11 ಸಾವು

7
12 ಮಂದಿಯ ರಕ್ಷಣೆ

ಭಾರತದ ಸಿಬ್ಬಂದಿ ಇದ್ದ ಎರಡು ಹಡಗುಗಳಿಗೆ ರಷ್ಯಾ ಕರಾವಳಿಯಲ್ಲಿ ಬೆಂಕಿ: 11 ಸಾವು

Published:
Updated:

ಮಾಸ್ಕೊ: ಭಾರತದ ಸಿಬ್ಬಂದಿ ಇರುವ ಎರಡು ಹಡಗುಗಳಿಗೆ ರಷ್ಯಾ ಕರಾವಳಿಯಲ್ಲಿ ಬೆಂಕಿ ಹತ್ತಿಕೊಂಡು ಕನಿಷ್ಠ 11 ಜನ ಮೃತಪಟ್ಟಿದ್ದಾರೆ.

ತಾಂಜಾನಿಯಾ ಧ್ವಜ ಹೊಂದಿದ್ದ ಉಭಯ ಹಡಗುಗಳಲ್ಲಿ ಭಾರತ, ಟರ್ಕಿ ಮತ್ತು ಲಿಬಿಯಾದ ಸಿಬ್ಬಂದಿ ಇದ್ದರು. ಈ ಪೈಕಿ ಒಂದು ಎಲ್‌ಪಿಜಿ ಸಾಗಣೆ ಹಡಗಾಗಿದ್ದು, ಮತ್ತೊಂದು ಟ್ಯಾಂಕರ್ ಒಳಗೊಂಡಿತ್ತು. ಇಂಧನ ವರ್ಗಾಯಿಸುತ್ತಿದ್ದ ವೇಳೆ ಹಡಗುಗಳಿಗೆ ಬೆಂಕಿ ತಗುಲಿತ್ತು. ರಷ್ಯಾ ಮತ್ತು ಕ್ರಿಮಿಯಾ ಗಡಿ ಪ್ರದೇಶವಾದ ಕೆರ್ಚ್‌ ಜಲಸಂಧಿ ಪ್ರದೇಶದಲ್ಲಿ ಸೋಮವಾರ ರಾತ್ರಿ ದುರಂತ ಸಂಭವಿಸಿದೆ.

ಕ್ಯಾಂಡಿ ಎಂಬ ಹೆಸರಿನ ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದು, ಈ ಪೈಕಿ 8 ಮಂದಿ ಭಾರತೀಯರು, 9 ಟರ್ಕಿ ಪ್ರಜೆಗಳಿದ್ದರು. ಮೆಸ್ಟ್ರೊ ಹೆಸರಿನ ಮತ್ತೊಂದು ಹಡಗಿನಲ್ಲಿ ಒಟ್ಟು 15 ಸಿಬ್ಬಂದಿ ಇದ್ದು, ಭಾರತ ಮತ್ತು ಟರ್ಕಿಯ ತಲಾ 7 ಹಾಗೂ ಲಿಬಿಯಾದ ಒಬ್ಬ ಸಿಬ್ಬಂದಿ ಇದ್ದರು.

‘ಆರಂಭದಲ್ಲಿ ಒಂದು ಹಡಗಿನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಅದು ಮತ್ತೊಂದು ಹಡಗಿಗೆ ವ್ಯಾಪಿಸಿರಬಹುದು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ರಷ್ಯಾದ ಸಾಗರ ವ್ಯವಹಾರಗಳ ವಕ್ತಾರರು ತಿಳಿಸಿದ್ದಾರೆ. ಕೆಲವು ಸಿಬ್ಬಂದಿ ಹೊತ್ತಿ ಉರಿಯುತ್ತಿರುವ ಹಡಗಿನಿಂದ ಸಮುದ್ರಕ್ಕೆ ಜಿಗಿದು ಪಾರಾಗಿದ್ದಾರೆ. 12 ಮಂದಿಯನ್ನು ರಕ್ಷಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಅಡ್ಡಿಯಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 6

  Sad
 • 0

  Frustrated
 • 0

  Angry

Comments:

0 comments

Write the first review for this !