ಬೆಂಗಳೂರು: ‘ಪದ ಹಾಡಿ ಭಿಕ್ಷೆ ಬೇಡುತ್ತಿದ್ದ ನನಗೆ ಜಾನಪದ ಕಲೆ ಕೈಹಿಡಿದ ಕಾರಣ, ವಿದೇಶದಲ್ಲಿಯೂ ಕಲಾ ಪ್ರದರ್ಶನ ನೀಡಲು ಸಾಧ್ಯವಾಯಿತು. ಜೀವನ ರೂಪಿಸಲು ಸಹಕಾರಿಯಾದ ಈ ಕಲೆಯನ್ನು ಹೊಸತಲೆಮಾರಿನವರು ಉಳಿಸಿ ಬೆಳೆಸಬೇಕು...’

ಹೀಗೆ ಜಾನಪದ ಕಲೆಯ ಸದ್ಯದ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ತಮ್ಮ ಕಲಾ ಸಾಧನೆಯ ಹಾದಿ ಸ್ಮರಿಸಿಕೊಂಡವರು ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಜೀವನಾನುಭವ ಹಂಚಿಕೊಂಡರು.

‘ಕಲೆ ನನಗೆ ತಾಯಿಯಿಂದ ಬಂದ ಬಳುವಳಿ. ತಂದೆ ಮಾದಯ್ಯ ಶೆಹನಾಯಿ ವಾದ್ಯ ಊದುತ್ತಾ ಊರೂರು ಸಾಗುತ್ತಿದ್ದರು. ತಾಯಿ ಮಂಚಮ್ಮ ಚೆನ್ನಾಗಿ ಸೋಬಾನೆ ಪದ ಹಾಡುತ್ತಿದ್ದಳು. ದನ ಕಾಯುತ್ತ, ಊರಿನವರ ಹೊಲದಲ್ಲಿ ಕಳೆ ಕಿತ್ತು ಕೂಲಿ ಮಾಡಿ ಮನೆ ನಡೆಸುತ್ತಿದ್ದಳು. ನಾನೂ ಅವ್ವನೊಂದಿಗೆ ಕಳೆ ಕೀಳುತ್ತ ಪದ ಹಾಡಲು ಕಲಿತೆ’ ಎಂದು ಬಾಲ್ಯವನ್ನು ಸ್ಮರಿಸಿಕೊಂಡರು.

‘ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. 8ನೇ ತರಗತಿಗೇ ಶಾಲೆ ಬಿಟ್ಟ ನನ್ನನ್ನು, ಹೊಟ್ಟೆಗೆ ಹಿಟ್ಟಾದರೂ ಸಿಗುತ್ತದೆ ಎಂಬ ಕಾರಣಕ್ಕೆ ತಂದೆ ಗುರುಗಳೊಬ್ಬರ ಬಳಿ ಭಿಕ್ಷೆ ಬೇಡಲು ಸೇರಿಸಿದರು. ಅವರೊಂದಿಗೆ ಮನೆ ಮನೆಗೆ ಹೋಗಿ ಮನೆ ದೇವರ ಪದಗಳನ್ನು ಹಾಡಿ ಭಿಕ್ಷೆ ಬೇಡುತ್ತಿದ್ದೆ. ಅವರು ಹೇಳಿದ್ದನ್ನು ಕೇಳಿ ಹಾಡು ಕಲಿತೆ. ನಂತರ ಬೆಂಗಳೂರಿಗೆ ಬಂದು ಪದ ಹಾಡಿ ಭಿಕ್ಷೆ ಬೇಡಿದೆ. ರಸ್ತೆಯಲ್ಲೇ ಮಲಗುತ್ತಿದ್ದ ನನಗೆ ಕಷ್ಟದ ಹಾದಿಯಲ್ಲಿ ಜಾನಪದ ಕೈಹಿಡಿಯಿತು’ ಎಂದರು.

‘8ನೇ ತರಗತಿ ಪೂರ್ಣಗೊಳಿಸದ ನನಗೆ ಕಲಾ ಸಾಧನೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಕಲೆಯಿಂದಾಗಿಯೇ ನಾನು ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದೇನೆ’ ಎಂದು ಅಭಿಮಾನದಿಂದ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-4-2053338578

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.