ಧಾರವಾಡ: ಕಲೆ, ಸಾಹಿತ್ಯ ಉಳಿಸಿ-ಬೆಳೆಸಲು ಎಲ್ಲ ಕಲಾವಿದರು ಶ್ರಮಿಸಬೇಕು ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಮಂಜುನಾಥ ಹಗೇದಾರ ಹೇಳಿದರು.

ಡಿ.ಕೆ. ಹಾವೇರಿಪೇಟ್ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಭಾನುವಾರ ನಡೆದ ರಂಗ ಚಿಂತನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧಾರವಾಡವು ಸಂಗೀತ, ಕಲೆ, ಮತ್ತು ಸಾಹಿತ್ಯದ ತವರೂರಾಗಿದ್ದು, ನಾಡಿನ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿದಿದೆ. ಕಲಾವಿದರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದರು.

ಶಿಕ್ಷಕ ರಂಗನಾಥ ವಾಲ್ಮೀಕಿ ಮಾತನಾಡಿ, ‘ಕಲೆ, ಕಲಾವಿದ ನಾಡಿನ ಸಂಪತ್ತು. ಎರಡೂ ಉಳಿದರೆ ಮಾತ್ರ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ. ತಂತ್ರಜ್ಞಾನದ ಪ್ರಭಾವದಿಂದ ರಂಗಭೂಮಿ ಕಲೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಸರ್ಕಾರವು ಕಲಾವಿದರನ್ನು ಪ್ರೋತ್ಸಾಹಿಸಲು ಸಹಾಯ ಧನ ನೀಡುವ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಫೌಂಡೇಶನ್ ಅಧ್ಯಕ್ಷ ಕಲ್ಮೇಶ್ ಹಾವೇರಿಪೇಟ್, ಕಲಾಸಂಗಮ ಸಂಸ್ಥೆಯ ಅಧ್ಯಕ್ಷ ಪ್ರಭು ಹಂಚಿನಾಳ, ಎನ್.ಎ. ದೇಸಾಯಿ, ಬಸವರಾಜ ಮುಳಗೋಡ, ಲಕ್ಷ್ಮೀ ಹಾವೇರಿಪೇಟ್, ನಿರ್ದೇಶಕ ಅರವಿಂದ ಮುಳಗುಂದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-24-1859108108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.