ಹುಕ್ಕೇರಿ: ರಿಬಿಲ್ಡ್ ಇಂಡಿಯಾ ಸಂಸ್ಥೆಯ ಸಹಕಾರದೊಂದಿಗೆ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೊ ಕೇಂದ್ರದ ದಶಮಾನೋತ್ಸವದ ಅಂಗವಾಗಿ ತಾಲ್ಲೂಕಿನ ಯಲ್ಲಾಪೂರ-ಕರಗುಪ್ಪಿ ಗ್ರಾಮದ ರೇಡಿಯೊ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದ ಶ್ರೀ ಶಿವಯೋಗಿಶ್ವರ ಭಜನಾ ಮಂಡಳ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆಯಿತು.

ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ, ಭಜನೆಯಂತಹ ಸಾಂಸ್ಕೃತಿಕ ಹಾಗೂ ಭಕ್ತಿಪರ ಕಾರ್ಯಕ್ರಮ ಸಮಾಜದಲ್ಲಿ ಒಗ್ಗಟ್ಟು ಬೆಳೆಸುವುದರ ಜತೆ ಗ್ರಾಮೀಣ ಸಂಸ್ಕೃತಿ ಉಳಿವಿಕೆಗೂ ಸಹಕಾರಿಯಾಗುತ್ತವೆ ಎಂದರು.

ಭಜನಾ ಸ್ಪರ್ಧೆಯಲ್ಲಿ ಗೋಕಾಕ ತಾಲ್ಲೂಕಿನ ತವಗದ ಬಾಳೇಶ್ವರ ಭಜನಾ ಮಂಡಳ ದ್ವಿತೀಯ ಸ್ಥಾನ, ಹಾಗೂ ಹುಕ್ಕೇರಿ ತಾಲ್ಲೂಕಿನ ಮದಮಕ್ಕನಾಳ ಗ್ರಾಮದ ದುರದುಂಡೇಶ್ವರ ಭಜನಾ ಮಂಡಳಿ ತೃತೀಯ ಸ್ಥಾನ ಪಡೆಯಿತು.

ನಗದು ಬಹುಮಾನ: ಪ್ರಥಮ ಬಹುಮಾನ ₹10,001, ದ್ವಿತೀಯ ₹7,001 ಹಾಗು ತೃತೀಯ ₹5001 ನಗದು ಬಹಮಾನ ಹಾಗೂ ಪಾರಿ ತೋಷಕ ನೀಡಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿ ಸದಸ್ಯರಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ನಿರ್ಣಾಯಕರು: ಭಜನಾ ಸ್ಪರ್ಧೆಯ ನಿರ್ಣಾಯಕರಾಗಿ ಸಂಗೀತಕಾರ ಅಕ್ಷಯ ಕುಲಕರ್ಣಿ,ತಬಲಾ ವಾದಕ ಸುಪ್ರೀತ ಲೋಕಾಪೂರ ಕಾರ್ಯನಿರ್ವಹಿಸಿದರು. ಹಿಡಕಲ್ ಡ್ಯಾಂನಲ್ಲಿನ ಶಕ್ತಿ ಸದನದ ಸಂಯೋಜಕಿ ಸುರೇಖಾ ಪಾಟೀಲ, ಯರಗಟ್ಟಿ ಪಬ್ಲಿಕ್ ಸ್ಕೂಲಿನ ಪ್ರಾಚಾರ್ಯ ಕಿರಣ ಚೌಗಲಾ, ಶಂಕರ ಕತ್ತಿ, ನಮ್ಮೂರ ಬಾನುಲಿ ಸಮುದಾಯ ರೇಡಿಯೊ ಕೇಂದ್ರದ ನಿರೂಪಕ ಆರ್.ಜೆ. ಚೇತನ ಕುಲಕರ್ಣಿ ಹಾಗೂ ಮಹಾಂತೇಶ ಜೋರ್ಲಿ ಸ್ಪರ್ಧೆ ಸಂಘಟಿಸಿದ್ದರು. ಸ್ಪರ್ಧೆಯಲ್ಲಿ 10 ಭಜನಾ ತಂಡಗಳ ನೂರು ಸದಸ್ಯರು ಭಾಗವಹಿಸಿ ಭಕ್ತಿಮಯ ವಾತಾವರಣ ನಿರ್ಮಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-21-2004126395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.